GSAT-20 Satellite Luanch: ಇದೇ ತಿಂಗಳ ನವೆಂಬರ್ 20 ರಂದು (ISRO – Indian Space Research Organization) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಜಿಸ್ಯಾಟ್- 20 ಉಪಗ್ರಹ ಉಡಾವಣೆಯಾಗಲು ಸಜ್ಜಾಗಿದೆ. ಇದಕ್ಕೆ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಫಾಲ್ಕನ್ 9 ರ ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗುತ್ತಿದೆ.
ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (NSIL – New Space India Limited) ಜಿಸ್ಯಾಟ್ – 20 ಉಪಗ್ರಹದ ಮಾಲೀಕತ್ವ ಹಾಗೂ ನಿರ್ವಾಹಣೆಯ ಹೊಣೆ ಹೊತ್ತಿದೆ. ಭಾರತದಲ್ಲಿ ಸಿದ್ಧವಾಗುತ್ತಿರುವ ಸ್ಮಾರ್ಟ್ ಸಿಟಿಗಳನ್ನು ಗುರಿಯಾಗಿಸಿಕೊಂಡು ಇದಕ್ಕೆ ಅಗತ್ಯವಿರುವ ಸಂಹವನಕ್ಕೆ ಉಪಯೋಗವಾಗುವಂತಹ ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿ ಜಿಸ್ಯಾಟ್-20 ಹೊಂದಿದೆ.
ಅಮೇರಿಕಾದ ಕೇಪ್ ಕ್ಯಾನವರೆಲ್ ನಿಂದ ಜಿಸ್ಯಾಟ್-20 ಉಪಗ್ರಹವನ್ನು ನಭಕ್ಕೆ ಉಡಾವಣೆ ಮಾಡಲು ತಯಾರಿ ನಡೆಸಲಾಗುತ್ತಿದೆ.
ಈ ಮೊದಲು ಉಪಗ್ರವನ್ನು ಭಾರತದ ಎಲ್‌ವಿಎಮ್ 3 (LVM-3 – Launch Vehicle Mark-3) ರಾಕೆಟ್‌ನಲ್ಲಿ ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು ಆದರೆ 4,700 ಕೆಜಿಯಿದ್ದ ಜಿಸ್ಯಾಟ್-20 ಉಪಗ್ರಹವನ್ನು ಸಾಗಿಸಲು ಭಾರತದ ರಾಕೆಟ್‌ಗಳು ವಿಫಲವಾದುದ್ದರಿಂದ ಸ್ಪೇಸ್ ಎಕ್ಸ್ ನ ಫಾಲ್ಕನ್ 9 ರಾಕೆಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
GSAT-N2, CMS-03 ಎಂದೂ ಕರೆಯಲಾಗುತ್ತಿರುವ GSAT-20 ಉಪಗ್ರಹವು ಭಾರತದಾದ್ಯಂತ ಬ್ರಾಡ್‌ಬ್ಯಾಂಡ್ ಸೇವೆಯನ್ನು ಹಾಗೂ ವಿಮಾನದೊಳಗೂ ಸಹ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವುದಾಗಿ ವರದಿಯಾಗಿದೆ.
ಒಟ್ಟು 4,700 ಕೆಜಿ ತೂಗುವ, 14 ವರ್ಷದವರೆಗೆ ಕಾರ್ಯಾಚರಣೆಯಲ್ಲಿರುವ ಭರವಸೆಯನ್ನು ಹೊಂದಿರುವ, 60–70 ಮಿಲಿಯನ್ ವೆಚ್ಚದೊಂದಿಗೆ ತಯಾರಾಗಿರುವ ಜಿಸ್ಯಾಟ್-20 ಉಪಗ್ರಹವು ಫಾಲ್ಕನ್ 9 ನೊಂದಿಗೆ ಮುಂದಿನ ವಾರ ಕಕ್ಷೆಗೆ ಸೇರಲು ಯುಎಸ್‌ನಲ್ಲಿ ಸಜ್ಜಾಗಿದೆ.