Nayanthara: Beyond the Fairy Tale ನೆಟ್‌ಫ್ಲಿಕ್ಸ್ ನಲ್ಲಿ ನಾಳೆ ಬಿಡುಗಡೆಯಾಗುತ್ತಿರುವ ಲೇಡಿ ಸೂಪರ್ ಸ್ಟಾರ್ ಎಂದೇ ಪ್ರಖ್ಯಾತಿಯಾಗಿರುವ ನಟಿ ನಯನತಾರಾ ಅವರ ಜೀವನ ಆಧಾರಿತ ಸಾಕ್ಷ್ಯಚಿತ್ರಕ್ಕೀಗ ತಲೆಬಿಸಿ ಶುರುವಾಗಿದೆ.
ನಯನತಾರಾ ಅಭಿನಯಿಸಿದ್ದ ಹಾಗೂ ನಟ ಧನುಷ್ ನಿರ್ಮಾಣ ಮಾಡಿದ್ದ ‘ನಾನು ರೌಡಿ ಧಾನ್’ ಚಿತ್ರದ 3 ಸೆಕೆಂಡ್ ಕ್ಲಿಪ್ ಅನ್ನು ಬಿಡುಗಡೆಗೆ ಸಿದ್ಧವಾಗಿರುವ ನಯನತಾರಾ ಡಾಕ್ಯುಮೆಂಟರಿಯಲ್ಲಿ ಬಳಸಿದಕ್ಕಾಗಿ ನಟ ಧನುಷ್ ಸಾಕ್ಷ್ಯಚಿತ್ರದ ಮೇಲೆ 10 ಕೋಟಿ ರೂ. ಕಾಪಿರೈಟ್ ಕೇಸ್ ಹಾಕಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿರುವ ನಯನತಾರಾ, ತಮ್ಮ ವೃತ್ತಿ ಜೀವನ, ಪ್ರೀತಿ, ಮದುವೆ ಹಾಗೂ ಸಿನೆಮಾ ರಂಗದ ಪ್ರಮುಖರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದ ಈಗ ಬಿಡುಗಡೆಯಾಗುತ್ತಿರುವ ಸಾಕ್ಷ್ಯಚಿತ್ರದಲ್ಲಿ ತಮಗೆ ಅತ್ಯಂತ ವಿಶೇಷವಾದ ಮತ್ತು ಪ್ರಮುಖವಾಗಿದ್ದ ‘ನಾನು ರೌಡಿ ಧಾನ್’ ಸಿನೆಮಾದ ನೆನಪುಗಳು ಒಳಗೊಂಡಿಲ್ಲ.
‘ನಾನು ರೌಡಿ ಧಾನ್’ ಸಿನೆಮಾದ ಹಾಡುಗಳು, ಚಿತ್ರದ ತುಣುಕುಗಳು ಕೊನೆಗೆ ಕೆಲವು ಫೋಟೋಗಳನ್ನು ಬಳಸಿಕೊಳ್ಳಲು ವಿನಂತಿಸಿಕೊಂಡು, NOC (No Objection Certificate) ಗಾಗಿ 2 ವರ್ಷ ನಿಮ್ಮೊಂದಿಗೆ ಹೋರಾಡಿದರೂ ನೀವು ಅನುಮತಿ ನೀಡಲಿಲ್ಲ. ಕೊನೆಗೆ ಬಳಸಿಕೊಂಡಿದ್ದ ದೃಶ್ಯಗಳನ್ನು ಕತ್ತರಿಸಿ, ನೆಟ್‌ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು.
ಆದರೆ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆಯಾದ ಮೇಲೆ ನೀವು ಕಾನೂನು ನೋಟೀಸ್ ಕಳುಹಿಸಿದ್ದೀರಿ ಅದು ಕೂಡ ಕೇವಲ 3 ಸೆಕೆಂಡ್ ಇರುವ ತುಣುಕುಗಳಿಗೆ 10 ಕೋಟಿ ರೂ. ಬೇಡಿಕೆ ಇಟ್ಟಿದ್ದೀರಿ. ಹಾಗೂ ಆ ತುಣುಕುಗಳು ತಮ್ಮ ಸ್ವಂತ ಕ್ಯಾಮೆರಾದಲ್ಲಿ ಚಿತ್ರಿಸಲಾಗಿತ್ತು ಹಾಗೂ ಆ ತುಣುಕುಗಳೆಲ್ಲಾ ಬಿಟಿಎಸ್ (BTS – Behind The Scenes) ನದಾಗಿತ್ತು.
ಅದಲ್ಲದೆ ಆ ತುಣುಕುಗಳು ಇದಕ್ಕು ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಇದು ತುಂಬಾ ಆಘಾತಕಾರಿಯಾಗಿದೆ. ಇದಕ್ಕೆ ಕಾನೂನುಬದ್ದವಾಗಿಯೇ ನಾವು ಉತ್ತರಿಸುತ್ತೇವೆ ಎಂದು ನಟ ಧನುಷ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಯನತಾರಾ ಅವರ ಈ ಬಹಿರಂಗ ಪೋಸ್ಟ್ ಗೆ ಸಿನೆಮಾರಂಗದ ಅನೇಕರು ಬೆಂಬಲ ಸೂಚಿಸಿದ್ದಾರೆ.
ನಯನತಾರಾ ಅವರ ಸಂಗಾತಿ ವಿಘ್ನೇಷ್ ಶಿವನ್ ಕೂಡ ವಿವಾದಕ್ಕೆ ಗುರಿಯಾಗಿರುವ 3 ಸೆಕೆಂಡಿನ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು, ’10 ಕೋಟಿ ಮೌಲ್ಯದ ಈ ವಿಡಿಯೋವನ್ನು ಇಲ್ಲಿ ಉಚಿತವಾಗಿ ನೋಡಿ ಎಂದು ಬರೆದುಕೊಂಡು #SpreadLove Sir ಎಂದು ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.