Roopantara kannada Movie OTT

ಜುಲೈನಲ್ಲಿ ತೆರೆಕಂಡಿದ್ದ ‘ಮಿಥಿಲೇಶ್ ಎಡವಲತ್’ ರವರ ನಿರ್ದೇಶನದ ‘ರೂಪಾಂತರ’ ಚಿತ್ರ ಈಗ OTT ಪ್ಲಾಟ್‌ಫಾರ್ಮ್ ನಲ್ಲಿ ಇಂದು ಬಿಡುಗಡೆಯಾಗುತ್ತಿದೆ.

‘ರಾಜ್ ಬಿ ಶೆಟ್ಟಿ’ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವಂತಹ ‘ರೂಪಾಂತರ’ವು ಒಟ್ಟು 4 ಕಥೆಗಳನ್ನು ಒಳಗೊಂಡಿದ್ದು 4 ಕಥೆಗಳಲ್ಲಿ ಬರುವ ಹಲವು ವ್ಯಕ್ತಿಗಳ ಜೀವನದಲ್ಲಿ ಆಗುವ ಘಟನೆಗಳಿಂದ ಹೇಗೆ ರೂಪಾಂತರಗೊಳ್ಳುತ್ತಾರೆ ಎಂಬುವುದು ಚಿತ್ರದ ಒಂದೆಳೆ ಕಥೆಯಾಗಿದೆ. ಸಂಪೂರ್ಣ ಚಿತ್ರವನ್ನು ‘ಅಮೇಜಾ಼ನ್ ಪ್ರೈಮ್’ ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

‘ಒಂದು ಮೊಟ್ಟೆಯ ಕಥೆ’ ಯಲ್ಲಿ ಕೆಲಸ ಮಾಡಿದ ತಂಡವೇ ರೂಪಾಂತರವನ್ನು ನಿರ್ಮಿಸಿದ್ದು ‘ಸುಹಾನ್ ಪ್ರಸಾದ್’ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ರಾಜ್ ಬಿ ಶೆಟ್ಟಿಯವರ ‘ಲೈಟರ್ ಬುದ್ಧ ಫಿಲಂಸ್’ ಈ ಚಿತ್ರವನ್ನು ಪ್ರಸ್ತುತಪಡಿಸಿದೆ.

ಮಿಥುನ್ ಮುಕುಂದ್ ಅವರ ಸಂಯೋಜನೆ ಮಾಡಿದ್ದ ‘ಕಿತ್ತಾಳೆ’ ಹಾಡನ್ನು ನಟಿ ‘ಚೈತ್ರ ಆಚಾರ್’ ಹಾಡಿದ್ದು ಆ ಹಾಡಿಗೆ ಸಂಗೀತ ಕೇಳುಗರಿಂದ ಭಾರಿ ಮೆಚ್ಚುಗೆ ಗಳಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಅದೇನಿದ್ದರು ರಾಜ್ ಬಿ ಶೆಟ್ಟಿ ಅವರ ಸಂಭಾಷಣೆಯ, ಭರತ್ ಜಿ.ಬಿ ಮತ್ತು ಇತರರು ನಿಮ್ಮನ್ನು’ರೂಪಾಂತರ’ ಮೂಲಕ ರಂಜಿಸಲು ‘ಅಮೇಜಾ಼ನ್ ಪ್ರೈಮ್’ ನಲ್ಲಿ ಇಂದು ಬರುತ್ತಿದ್ದಾರೆ.