IPL 2025 Auction

IPL Auction 2025: ಐಪಿಎಲ್ 2025 ರ ಆವೃತ್ತಿಯ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ. ಇಂದಿನಿಂದ 2 ದಿನಗಳವೆರೆಗೆ ನಡೆಯುವ ಈ ಹರಾಜು ಪ್ರಕ್ರಿಯೆಯು ಈ ಬಾರಿ ಕುತೂಹಲ ಕೆರಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಿಂದ ಹೊರಬಂದಿರುವ ರಿಷಭ್ ಪಂತ್, LSG ಯಿಂದ ಹೊರಬಂದಿರುವ ಕೆ ಎಲ್ ರಾಹುಲ್ ಹಾಗೂ KKR ನಿಂದ ಹೊರಬಂದಿರುವ ಶ್ರೇಯಸ್ ಆಯ್ಯರ್ ಮುಂಬರುವ ಐಪಿಎಲ್‌ ಲೀಗ್ ನಲ್ಲಿ ಯಾವ ಯಾವ ಟೀಮ್‌ಗಳ ಭಾಗವಾಗಲಿದ್ದಾರೆ ಎಂದು ನೋಡಬೇಕಿದೆ.

3 ವರ್ಷಗಳಿಗೊಮ್ಮೆ ನಡೆಯುವ ಈ ಮೆಗಾ ಐಪಿಎಲ್ ಹರಾಜು, ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ನಡೆಯುತ್ತಿದೆ. 10 ಐಪಿಎಲ್ ಫ್ರಾಂಚೈಸಿಗಳೊಳಗೊಂಡ ಈ ಹರಾಜಿನಲ್ಲಿ ಒಟ್ಟು 577 ಆಟಗಾರರು ಇದರ ಭಾಗವಾಗಲಿದ್ದಾರೆ. ಇವರಲ್ಲಿ 567 ಭಾರತೀಯ ಆಟಗಾರರು ಹಾಗೂ ಇನ್ನುಳಿದಂತೆ 210 ವಿದೇಶಿ ಆಟಗಾರರಾಗಿದ್ದಾರೆ.

IPL 2025 mega auction

ಈ ಬಾರಿ ಹರಾಜಿನ ಪ್ರಮುಖ ಆಟಗಾರರಲ್ಲಿ ರಿಷಭ್ ಪಂತ್, ಕೆ ಎಲ್ ರಾಹುಲ್, ಮಿಚ್ಚೆಲ್ ಸ್ಟಾರ್ಕ್, ಶ್ರೇಯಸ್ ಅಯ್ಯರ್, ಜಾಸ್ ಬಟ್ಲರ್ ಇವರ ಮೇಲೆ ಫ್ರಾಂಚೈಸಿ ಮಾಲೀಕರ ದೃಷ್ಠಿ ನೆಟ್ಟಿದೆ. ಒಟ್ಟು 120 ಕೋಟಿ ಬಜೆಟ್ ಪ್ರತಿ ಫ್ರಾಂಚೈಸಿಗಳು ಹೊಂದಿರುತ್ತವೆ ಆದರೆ ತಮಗೆ ಬೇಕಿರುವ ಆಟಗಾರರನ್ನು ಐಪಿಎಲ್ ರಿಟೆನ್‌ಕ್ಷನ್‌ನಲ್ಲಿ ಉಳಿಸಿಕೊಂಡು ಉಳಿದಿರುವ ಮೊತ್ತದೊಂದಿಗೆ ಹರಾಜು ಪ್ರಕ್ರಿಯೆಯ ಕಣಕ್ಕೆ ಫ್ರಾಂಚೈಸಿಗಳು ಇಳಿಯಲಿವೆ.

ಯಾವ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಂಡಿದ್ದಾರೆ ಹಾಗೂ ಯಾರ ಬಳಿ ಎಷ್ಟು ಮೊತ್ತವಿದೆ ತಿಳಿಯಲು, ಇಲ್ಲಿ ಕ್ಲಿಕ್ ಮಾಡಿ.

ಇನ್ನು ಐಪಿಎಲ್ ರಿಟೆನ್‌ಕ್ಷನ್‌ನಲ್ಲಿ ಉಳಿಸಿಕೊಳ್ಳದ ಫ್ರಾಂಚೈಸಿಗಳು RTM (Right to Match) ಬಳಸುವ ಮೂಲಕ ತಮ್ಮ ಆಟಗಾರರನ್ನು ಹರಾಜಿನಲ್ಲಿ ಮತ್ತೆ ತಮ್ಮ ತಮ್ಮ ಫ್ರಾಂಚೈಸಿಗಳಲ್ಲಿ ಉಳಿಸಿಕೊಳ್ಳುವ ಅವಕಾಶವು ಇರುತ್ತದೆ. ಆದರೆ ಈ ವರ್ಷ ಅದಕ್ಕೊಂದು ಟ್ವಿಸ್ಟ್ ಇಡಲಾಗಿದೆ.

ಅದೇನೆಂದರೆ ಬೇರೆ ಫ್ರಾಂಚೈಸಿಯವರು ಹರಾಜಿನಲ್ಲಿ ಒಬ್ಬ ಆಟಗಾರನನ್ನು ಖರೀದಿಸಿದಲ್ಲಿ, ಆ ಆಟಗಾರ ಮೊದಲಿದ್ದ ಫ್ರಾಂಚೈಸಿಯವರು RTM (Right to Match) ಕಾರ್ಡ್ ಬಳಸಿದರೆ ಮೊದಲು ಖರೀದಿಸಿದ ಫ್ರಾಂಚೈಸಿಯವರು ಬಿಡ್ ಹಣವನ್ನು ಏರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಆ ಮೊತ್ತವನ್ನು ಕೊಟ್ಟು ಖರೀದಿಸಿದರೆ ಮಾತ್ರ ಆಟಗಾರ RTM (Right to Match) ಕಾರ್ಡ್ ಉಪಯೋಗಿಸಿದ ಫ್ರಾಂಚೈಸಿಯ ಭಾಗವಾಗುತ್ತಾರೆ. ಇಲ್ಲವಾದಲ್ಲಿ ಮೊದಲು ಖರೀದಿಸಿದ ಹೊಸ ಫ್ರಾಂಚೈಸಿಯ ಭಾಗವಾಗುತ್ತಾರೆ.

IPL Mega auction 2025

ಪ್ರಮುಖ ಆಟಗಾರರನ್ನು ಜೊತೆಗೆ ಹಿಂದಿನ ಆವೃತ್ತಿಗಳಲ್ಲಿ ಮಿಂಚಿದ್ದ ಆಟಗಾರರಾದ ರಬಾಡ, ಅರ್ಷದೀಪ್ ಸಿಂಗ್, ಚಾಹಲ್, ಲ್ಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಮೊಹಮದ್ ಸಿರಾಜ್ ಮತ್ತು ಮೊಹಮದ್ ಶಮಿ ಈ ಬಾರಿ ಯಾವ ಯಾವ ಟೀಮ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ರಿಟೆನ್‌ಕ್ಷನ್‌ನಲ್ಲಿ ಕೋಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಉಳಿಸಿಕೊಂಡಿರುವುದರಿಂದ ಟೀಮ್‌ಗೆ ನಾಯಕನ ಅವಶ್ಯಕತೆಯಿದೆ. ಸೋಷಿಯಲ್ ಮೀಡಿಯಾದಲ್ಲಿ ಕನ್ನಡಿಗರಿಗೆ ಮಣೆ ಹಾಕಲು ಮತ್ತು ಕೆ ಎಲ್ ರಾಹುಲ್ ಅವರನ್ನು ಖರೀದಿಸಲು ಆರ್‌ಸಿಬಿಯ ಅಭಿಮಾನಿ ಬಳಗವು ಆಸೆ ವ್ಯಕ್ತಪಡಿಸುತ್ತಿದೆ.

ಇದೆಲ್ಲದಕ್ಕೂ ಇಂದು ಹಾಗೂ ನಾಳೆ ನಡೆಯುವ ಈ ಮೆಗಾ ಐಪಿಎಲ್ ಹರಾಜಿನಲ್ಲಿ ಉತ್ತರ ಸಿಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಜಿಯೋ ಸಿನೆಮಾ ಆಪ್ ನಲ್ಲಿ ಹರಾಜಿನ ನೇರ ಪ್ರಸಾರ ನೋಡಬಹುದಾಗಿದೆ.