IPL RETENTION 2025

IPL Retention 2025 ರ ರಿಟೆನ್‌ಷನ್ ಇವತ್ತಿಗೆ ಮುಕ್ತಾಯವಾಗಿದೆ. ಯಾವ ಯಾವ ಟೀಮ್ ಯಾವ ಯಾವ ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಇದೆಲ್ಲದರ ಸಂಪೂರ್ಣ ವರದಿ ಇಲ್ಲಿದೆ.

 

ಲಖನೌ ಸೂಪರ್ ಜೈಂಟ್ಸ್: ಕಳೆದ ಐಪಿಎಲ್‌ನ ಕೆಲವು ಪಂದ್ಯಗಳಲ್ಲಿ ಕೆ ಎಲ್ ರಾಹುಲ್ ನಾಯಕತ್ವದ LSG ಸೋತಿರುವುದಕ್ಕೆ ತಂಡದ ಮಾಲೀಕರೊಂದಿಗಿನ ಸಂಭಾಷಣೆಯ ವೀಡಿಯೋವೊಂದು ಕ್ರಿಕೆಟ್ ಪ್ರೇಮಿಗಳ ಟೀಕೆಗೆ ಗುರಿಯಾಗಿತ್ತು. ಅದಕ್ಕೆ ಸರಿಯಾಗಿ ಮುಂಬರುವ ಐಪಿಎಲ್ ಪಂದ್ಯಕ್ಕೆ ಕೆ ಎಲ್ ರಾಹುಲ್ ಅವರನ್ನು ತಂಡ ಉಳಿಸಿಕೊಂಡಿಲ್ಲ. ಒಟ್ಟು 51 ಕೋಟಿ ರೂ. ಖರ್ಚು ಮಾಡಿ ಹರಾಜಿಗೆ 69 ಕೋಟಿ ಉಳಿಸಿಕೊಂಡಿದೆ.

 

  • ಉಳಿಸಿಕೊಂಡಿರುವ ಆಟಗಾರರು: ನಿಕೋಲಸ್ ಪೂರನ್ (21 ಕೋಟಿ), ರವಿ ಬಿಷ್ಣೋಯಿ (11 ಕೋಟಿ), ಮಯಾಂಕ್ ಯಾದವ್ (11 ಕೋಟಿ), ಮೋಹ್ಸಿನ್ ಖಾನ್ (4 ಕೋಟಿ), ಆಯುಷ್ ಬದೋನಿ (4 ಕೋಟಿ)

 

ಸನ್‌ರೈಸರ‍್ಸ್ ಹೈದರಾಬಾದ್: ರೀಟೈನ್‌ನಲ್ಲೇ ಅಧಿಕ ಮೊತ್ತ ಕೊಟ್ಟು ಉಳಿಸಿಕೊಂಡಿರುವ ಸಾಲಿನಲ್ಲಿ ಎಚ್ ಕ್ಲಾಸೀನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 75 ಕೋಟಿ ವ್ಯಯಿಸಿರುವ SRH, 45 ಕೋಟಿ ಉಳಿಸಿಕೊಂಡಿದೆ.

  •  

  • ಉಳಿಸಿಕೊಂಡಿರುವ ಆಟಗಾರರು: ಎಚ್ ಕ್ಲಾಸೀನ್ (23 ಕೋಟಿ), ಪ್ಯಾಟ್ ಕಮಿನ್ಸ್ (18 ಕೋಟಿ), ಅಭಿಷೇಕ್ (14 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ), ನಿತೀಶ್ ಕುಮಾರ್ ರೆಡ್ಡಿ (6 ಕೋಟಿ)

 

ಕೋಲ್ಕತ್ತ ನೈಟ್ ರೈಡರ್ಸ್: KKR ಈ ಭಾರಿ ಒಟ್ಟು 6 ಆಟಗಾರರನ್ನು ಉಳಿಸಿಕೊಂಡು, ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಯಾರ ತಂಡದ ಪಾಲಾಗಲಿದ್ದಾರೆ ಎಂದು ನೋಡಬೇಕಿದೆ. 63 ಕೋಟಿ ತನ್ನಲ್ಲೇ ಉಳಿಸಿಕೊಂಡು, 57 ಕೋಟಿ ವ್ಯಯಿಸಿದೆ.

 

  • ಉಳಿಸಿಕೊಂಡಿರುವ ಆಟಗಾರರು: ರಿಂಕು ಸಿಂಗ್ (13 ಕೋಟಿ), ವರುನ್ ಸಿವಿ (12 ಕೋಟಿ), ಸುನಿಲ್ ನರೈನ್ ( 12 ಕೋಟಿ), ಆಂಡ್ರೆ ರಸೆಲ್ (12 ಕೋಟಿ), ಹರ್ಷಿತ್ ರಾನಾ (4 ಕೋಟಿ), ರಮಣ್‌ದೀಪ್ (4 ಕೋಟಿ)

ಚೆನ್ನೈ ಸೂಪರ್ ಕಿಂಗ್ಸ್: ಮುಂದಿನ ವರ್ಷವೂ CSK ಗೆ ಮತ್ತೊಮ್ಮೆ ಧೋನಿ ಆಡಲಿದ್ದಾರೆ. ಮಾಲಿಂಗ ಅವರ ಬೌಲಿಂಗ್ ಶೈಲಿಯನ್ನು ಹೊಂದಿರುವ ಮತೀಶ ಪತಿರಾಣಾ ಅವರನ್ನು ಉಳಿಸಿಕೊಂಡಿರುವ ತಂಡ, ೬೫ ಕೋಟಿ ಖರ್ಚು ಮಾಡಿ, 55 ಕೋಟಿ ತನ್ನ ಖಾತೆಯಲ್ಲಿ ಉಳಿಸಿಕೊಂಡಿದೆ.

 

  • ಉಳಿಸಿಕೊಂಡಿರುವ ಆಟಗಾರರು: ಋತುರಾಜ್ ಗಾಯಕ್‌ವಾಡ್ (18 ಕೋಟಿ), ಮತೀಶ ಪತಿರಾಣಾ (13 ಕೋಟಿ), ಶಿವಂ ದೂಬೆ (12 ಕೋಟಿ), ರವೀಂದ್ರ ಜಡೇಜ (18 ಕೋಟಿ), ಎಮ್ ಎಸ್ ಧೋನಿ (4 ಕೋಟಿ)

 

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೋಹ್ಲಿಯನ್ನು ಉಳಿಸಿಕೊಳ್ಳುವುದರ ಮೂಲಕ ಐಪಿಎಲ್ ಫ್ರಾಂಚೈಸಿಯಲ್ಲಿ ಒಂದೇ ತಂಡದಲ್ಲಿ ಆಡಿರುವ ಮೊದಲ ಆಟಗಾರನೆಂದೆನಿಸಿಕೊಳ್ಳಲ್ಲಿದ್ದಾರೆ. ಸದ್ಯ ಟೆಸ್ಟ್ ಸರಣಿಯಲ್ಲಿ ಫಾರ್ಮ್ ಗೆ ಬರಲು ಯತ್ನಿಸುತ್ತಿರುವ ಕೋಹ್ಲಿ ಐಪಿಎಲ್‌ನಲ್ಲಿ ಹೇಗೆ ಆಡಲಿದ್ದಾರೆ ಎಂದು ನೋಡಬೇಕಿದೆ. 3 ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ 57 ಕೋಟಿ ವ್ಯಯಿಸಿ, ತನ್ನ ಖಾತೆಯಲ್ಲಿ 83 ಕೋಟಿ ಉಳಿಸಿಕೊಂಡಿದೆ.

 

  • ಉಳಿಸಿಕೊಂಡಿರುವ ಆಟಗಾರರು: ವಿರಾಟ್ ಕೋಹ್ಲಿ (21 ಕೋಟಿ), ರಜತ್ ಪಟಿದಾರ್ (11 ಕೋಟಿ), ಯಶ್ ದಯಾಳ್ (5 ಕೋಟಿ)

 

ಗುಜರಾತ್ ಟೈಟಾನ್ಸ್: 2022 ರಲ್ಲಿ ಸೇರ್ಪಡೆಯಾಗಿದ್ದ ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಸಾರಥ್ಯದಲ್ಲಿ 2023 ರ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಆಗಿತ್ತು. ನಂತರ ಹಾರ್ದಿಕ್ ಪಾಂಡ್ಯ ಬೇರೆ ತಂಡವನ್ನು ಸೇರಿದ್ದರು. ಕಳೆದ ವರ್ಷ ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಪ್ಲೇ ಆಫ್ ಪ್ರವೇಶಿಸಲು ಕೂಡ ವಿಫಲವಾಗಿತ್ತು. 5 ಆಟಗಾರರನ್ನು ಉಳಿಸಿಕೊಡಿರುವ GT, 69 ಕೋಟಿ ತನ್ನಲ್ಲೇ ಉಳಿಸಿಕೊಂಡಿದೆ.

 

  • ಉಳಿಸಿಕೊಂಡಿರುವ ಆಟಗಾರರು: ರಶೀದ್ ಖಾನ್ (18 ಕೋಟಿ), ಶುಭ್‌ಮನ್ ಗಿಲ್ (16.5 ಕೋಟಿ), ಸಾಯಿ ಸುದರ್ಶನ್ (8.50 ಕೋಟಿ), ರಾಹುಲ್ ತೆವಾಟಿಯ (4 ಕೋಟಿ), ಶಾರುಖ್ ಕೆ (4 ಕೋಟಿ)

 

ಮುಂಬೈ ಇಂಡಿಯನ್ಸ್: ಕಳೆದ ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಲಾಗಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕಾರಣ ಮುಂಬೈಗೆ ಬರಬೇಕಾದರೇ ನಾಯಕತ್ವವನ್ನು ಕೇಳಿದ್ದ ಹಾರ್ದಿಕ್ ಪಾಂಡ್ಯ ಅವರ ಮನವಿಗೆ ತಂಡದ ಮಾಲಿಕತ್ವವು ಅಸ್ತು ಎಂದಿತ್ತು. ಇದರಿಂದ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅದೇನೆ ಇದ್ದರು ಮುಂಬರುವ ಐಪಿಎಲ್‌ನಲ್ಲಿ ಏನಾಗಲಿದೆ ಎಂದು ನೋಡಬೇಕಿದೆ. 75 ಕೋಟಿಯಲ್ಲಿ 5 ಆಟಗಾರರನ್ನು ಉಳಿಸಿಕೊಂಡಿರುವ ಎಮ್‌ಐ ಖಾತೆಯಲ್ಲಿ 45 ಕೋಟಿ ಉಳಿದಿದೆ.

 

  • ಉಳಿಸಿಕೊಂಡಿರುವ ಆಟಗಾರರು: ಜಸ್‌ಪ್ರೀತ್ ಬುಮ್ರಾ (18 ಕೋಟಿ), ಸೂರ್ಯಕುಮಾರ್ ಯಾದವ್ (16.35 ಕೋಟಿ), ಹಾರ್ದಿಕ್ ಪಾಂಡ್ಯ (16.35 ಕೋಟಿ), ರೋಹಿತ್ ಶರ್ಮಾ (16.30 ಕೋಟಿ), ತಿಲಕ್ ವರ್ಮಾ (8 ಕೋಟಿ)

 

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್‌ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಅತೀ ಹೆಚ್ಚು ಬಜೆಟ್ ಖರ್ಚು ಮಾಡಿ 6 ಆಟಗಾರರನ್ನು ಉಳಿಸಿಕೊಂಡಿದೆ. 41 ಕೋಟಿ ಉಳಿಸಿಕೊಂಡಿರುವ RR ಯಾರನ್ನು ಹರಾಜಿನಲ್ಲಿ ಕೊಳ್ಳಲಿದೆ ಎಂದು ನೋಡಬೇಕಿದೆ.

 

  • ಉಳಿಸಿಕೊಂಡಿರುವ ಆಟಗಾರರು: ಸಂಜು ಸ್ಯಾಮ್‌ಸನ್ (18 ಕೋಟಿ), ಯಶಸ್ವಿ ಜೈಸ್ವಾಲ್ (18 ಕೋಟಿ), ರಿಯಾನ್ ಪರಾಗ್ (18 ಕೋಟಿ), ದ್ರುವ್ ಜುರೆಲ್ (14 ಕೋಟಿ), ಎಸ್ ಹೆಟ್‌ಮೆಯರ್ (11 ಕೋಟಿ), ಸಂದೀಪ್ (4 ಕೋಟಿ)

 

ಪಂಜಾಬ್ ಕಿಂಗ್ಸ್: 2024 ರ ಐಪಿಎಲ್‌ನ ಪಂಜಾಬ್ ತಂಡದ ನಾಯಕರಾಗಿದ್ದ ಶಿಖರ್ ಧವನ್, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ಮುಂಬರುವ ಐಪಿಎಲ್‌ನ ಭಾಗವಾಗಿರುವುದಿಲ್ಲ. ಅತೀ ಕಡಿಮೆ ಮೊತ್ತವನ್ನು ವ್ಯಯಿಸಿ ಕೇವಲ ಇಬ್ಬರು ಆಟಗಾರರನ್ನು ಉಳಿಸಿಕೊಂಡಿರುವ ಪಂಜಾಬ್ ಬಳಿ 110.5 ಕೋಟಿ ಇದ್ದು ಹರಾಜಿನಲ್ಲಿ ಯಾರನ್ನು ಖರೀದಿಸಲಿದೆ ಎಂದು ನೋಡಬೇಕಿದೆ.

 

  • ಉಳಿಸಿಕೊಂಡಿರುವ ಆಟಗಾರರು: ಶಶಾಂಕ್ ಸಿಂಗ್ (5.5 ಕೋಟಿ), ಪ್ರಭ್‌ಸಿಮ್ರನ್ ಸಿಂಗ್ (4 ಕೋಟಿ)

 

ಡೆಲ್ಲಿ ಕ್ಯಾಪಿಟಲ್ಸ್: 8 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಲ್ಲಿ ಆಡಿರುವ ರಿಷಭ್, ಡೆಲ್ಲಿ ಕ್ಯಾಪಿಟಲ್ಸ್ ನಿಂದ ನಿರ್ಗಮಿಸಿದ್ದಾರೆ, 2025 ರ ಐಪಿಎಲ್‌ನ ಹರಾಜಿನಲ್ಲಿ ಬಹು ಬೇಡಿಕೆಯ ಆಟಗಾರನಾಗುತ್ತಾರೆಂಬ ನಿರೀಕ್ಷೆಯಿದೆ. ಶ್ರೇಯಸ್ ಐಯ್ಯರ್ ಡೆಲ್ಲಿ ಕ್ಯಾಪಿಟಲ್ಸ್ ಮುನ್ನಡೆಸಬಹುದೆಂದು ಕೇಳಿಬರುತ್ತಿದೆ. ಅದಕ್ಕೆಲ್ಲಾ 2025 ರ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ಊಹಪೋಹಗಳಿಗೂ ತೆರೆ ಬೀಳಲಿದೆ. ಸದ್ಯ 76.25 ಕೋಟಿ ಬಜೆಟ್ ಎಮ್‌ಐ ಬಳಿ ಇದೆ.

 

  • ಉಳಿಸಿಕೊಂಡಿರುವ ಆಟಗಾರರು: ಅಕ್ಸರ್ ಪಟೇಲ್ (16.5 ಕೋಟಿ), ಕುಲ್‌ದೀಪ್ ಯಾದವ್ ( 13.15 ಕೋಟಿ), ತ್ರಿಸ್ಟಾನ್ ಸ್ಟಬ್ಬ್ಸ್ (10 ಕೋಟಿ), ಅಭಿಷೇಕ್ ಪೋರೆಲ್ (4 ಕೋಟಿ).

  •