Bengaluru auto rickshaw

Bengaluru: ಬೆಂಗಳೂರಿನಲ್ಲಿ ಯುವತಿಯೊಬ್ಬರು ಒಂದೇ ಬಾರಿಗೆ ಎರಡೆರಡು ಆಟೋಗಳನ್ನು ಬುಕ್ ಮಾಡಿದ್ದಾರೆ. ಇಬ್ಬರು ಆಟೋ ಚಾಲಕರು ಯುವತಿಯಿದ್ದ ಸ್ಥಳಕ್ಕೆ ಬಂದಾಗ, ಯುವತಿ ಒಂದು ಆಟೋವನ್ನು ರದ್ದು ಪಡೆಸಿ ಮತ್ತೊಂದು ಆಟೋದಲ್ಲಿ ಹೋಗಿ ಕುಳಿತಿದ್ದಾರೆ.

ಇದರಿಂದ ಕೋಪಗೊಂಡ ಆಟೋ ಚಾಲಕ ರದ್ದುಪಡಿಸಿದ ಕಾರಣವನ್ನು ಕೇಳಿದಾಗ, ತಾನು ರದ್ದು ಪಡೆಸಿಲ್ಲವೆಂದು ವಾದಿಸಿದ್ದಾರೆ. ಏಕಕಾಲಕ್ಕೆ ಎರಡು ಆಟೋ ಬುಕ್ ಹೇಗೆ ಮಾಡುತ್ತೀರಾ? ಎಂದು ಕೇಳಿದಾಗ ಇದಕ್ಕೆ ಪ್ರತಿಯಾಗಿ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎರಡು ಆಪ್‌ಗಳಲ್ಲಿ ಬೆಲೆಯನ್ನು ಪರಿಶೀಲಿಸಿ ಒಂದನ್ನು ಬುಕ್ ಮಾಡಿರುವುದಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಈ ವಾಗ್ವಾದದ ನಡುವೆ ತನ್ನ ತಂದೆಗೆ ಕರೆ ಮಾಡಿ ಆಟೋ ಚಾಲಕನ ಮೇಲೆ ದೂರು ನೀಡುತ್ತಿರುವುದು ಹಾಗೂ ಆಟೋ ಚಾಲಕನ ವಿವರಗಳನ್ನು ಹೇಳುತ್ತಿರುವುದು ಆಟೋ ಚಾಲಕ ಮಾಡಿದಂತಹ ವೀಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಳಕೆದಾರರಿಂದ ಭಾರಿ ಪರ ವಿರೋಧ ವ್ಯಕ್ತವಾಗುತ್ತಿದೆ.

ಆಪ್‌ಗಳಲ್ಲಿ 2 ಆಟೋಗಳನ್ನು ಬುಕ್ ಮಾಡಿ, ರದ್ದು ಪಡಿಸುವ ಆಯ್ಕೆಯನ್ನು ನೀಡಿರುವಾಗ ಯುವತಿ ಮಾಡಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದು ಒಂದಿಷ್ಟು ಜನ ವಾದಿಸಿದರೆ, ಇನ್ನೊಂದಿಷ್ಟು ಜನ ಆಟೋ ಚಾಲಕನೊಂದಿಗೆ ನಡೆದುಕೊಂಡ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ತಪ್ಪೆಂದು ವಾದಿಸಿದ್ದಾರೆ.