Udupi: Fraud of money on the pretext of help in ATM!
Home » ಟ್ರೆಂಡಿಂಗ್ ನ್ಯೂಸ್ » ಉಡುಪಿ: ATM ನಲ್ಲಿ ಸಹಾಯದ ನೆಪವೊಡ್ಡಿ ಹಣ ವಂಚನೆ! 2 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 3.39 ಲಕ್ಷ ಕಳೆದುಕೊಂಡ ನಾಗರೀಕರು.

ಉಡುಪಿಯಲ್ಲಿ 2 ಪ್ರತ್ಯೇಕ ಪ್ರಕರಣದಲ್ಲಿ ಹಿರಿಯ ನಾಗರೀಕರಿಬ್ಬರು ಹಣ ಕಳೆದುಕೊಂಡಿದ್ದಾರೆ. ಉಡುಪಿಯ ಕೆಲರ್ಕಳ ಬೆಟ್ಟದ ಜಗದೀಶ್ ರಾವ್ ಹಾಗೂ ಕೋಡಿ ಗ್ರಾಮದ ನಿವಾಸಿ ಚೆನ್ನಪ್ಪ ಹಣ ಕಳೆದುಕೊಂಡವರು.

ಅಕ್ಟೋಬರ್ 6 ರಂದು ಸಂತೆಕಟ್ಟೆಯಲ್ಲಿರುವ ಎಟಿಎಂನಿಂದ ಜಗದೀಶ್ ರಾವ್ ಅವರು 10,000 ರೂ.ಗಳನ್ನು ಡ್ರಾ ಮಾಡಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಅಕೌಂಟ್ ಖಾತೆಯನ್ನು ಪರೀಶೀಲಿಸುತ್ತಿರುವಾಗ, ಅಪರಿಚಿತ ವ್ಯಕ್ತಿಯೊಬ್ಬ ಸಹಾಯ ನೆಪದಲ್ಲಿ ಬಂದು ಎಟಿಎಂ ಕಾರ್ಡ್ ಅದಲುಬದಲು ಮಾಡಿದ್ದಾನೆ.

ಇದನ್ನರಿಯದ ಜಗದೀಶ್‌ರವರು ಮನೆಗೆ ಹಿಂತಿರುಗಿದ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 2,40,000 ಡ್ರಾ ಆಗಿರುವ ಸಂದೇಶವನ್ನು ಸ್ವೀಕರಿಸಿದ್ದಾರೆ.

ನಂತರ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಕಾರ್ಡ್ ವಿನಿಮಯ ಮಾಡಿಕೊಂಡಿರುವುದು ಖಾತರಿಯಾಗಿದೆ. ಉಡುಪಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಅಕ್ಟೋಬರ್ 4 ರಂದು ಪಾಂಡೇಶ್ವರ ಗ್ರಾಮದ ಸಾಸ್ತಾನದಲ್ಲಿರುವ ಕರ್ನಾಟಕ ಬ್ಯಾಂಕ್ ಎಟಿಎಂನಿಂದ 1000 ರೂ. ತೆಗೆದುಕೊಳ್ಳುವ ಸಂದರ್ಭದಲ್ಲಿ ಅಪರಿಚಿತನೊಬ್ಬ ಕಾರ್ಡ್ ಬದಲಾಯಿಸಿದ್ದಾನೆ. ಅ. 7 ರಂದು ಪುನಃ ಹಣ ತೆಗೆಯಲು ಪ್ರಯತ್ನಿಸಿದಾಗ ಹಣವಿಲ್ಲವೆಂದು ಗೊತ್ತಾಗಿದೆ.

ಕೂಡಲೇ ಬ್ಯಾಂಕ್‌ಗೆ ಭೇಟಿ ನೀಡಿ ವಿಚಾರಿಸಿದಾಗ ಸಾಲಿಗ್ರಾಮ, ಶಿವಮೊಗ್ಗ, ಕಾರ್ಗಲ್, ಗೋಕರ್ಣದ ವಿವಿದೆಡೆ ಒಟ್ಟು 99,000 ರೂಪಾಯಿ ಹಣ ಡ್ರಾ ಮಾಡಿರುವುದಾಗಿ ಬ್ಯಾಂಕ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.