Ola scooter caught fire in tiruvananthapuram
Home » ಟ್ರೆಂಡಿಂಗ್ ನ್ಯೂಸ್ » Ola Electric Scooter ಗೆ ಬೆಂಕಿ: ಚಲಿಸುತ್ತಿರುವಾಗಲೇ ಗಮನಿಸಿದ ವಾಹನ ಸವಾರ, ಅಪಾಯದಿಂದ ಪಾರು.

ತಿರುವನಂತಪುರ: ಓಲಾ ಸ್ಕೂಟರ್‌ಗಳ ಮೇಲೆ ಸಾಕಷ್ಟು ದೂರುಗಳು ಬರುತ್ತಿರುವ ಬೆನ್ನಲ್ಲೇ ಇಂದು ಬೆಳಗ್ಗೆ 10 ಘಂಟೆ ಸುಮಾರಿಗೆ ಕೇರಳದ, ತಿರುವನಂತಪುರಂ ನ ವಿಲಪ್ಪಿಲ್ಸಲಾ ದಲ್ಲಿ, ಓಲಾ ಇವಿಯೊಂದು ಬೆಂಕಿಗೆ ಆಹುತಿಯಾಗಿದೆ.

ಮೂರನೇ ವರ್ಷದ ಬಿಬಿಎ ಓದುತ್ತಿರುವ ವಿದ್ಯಾರ್ಥಿಯು ತನ್ನ ಸ್ನೇಹಿತನೊಂದಿಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದಾಗ ಗಾಡಿಯಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣ ರಸ್ತೆ ಬದಿಯಲ್ಲಿ ಗಾಡಿಯನ್ನು ನಿಲ್ಲಿಸಿದ್ದಾರೆ. ಇಳಿದ ಬೆನ್ನಲ್ಲೇ ಗಾಡಿಯು ಬೆಂಕಿಗಾಹುತಿಯಾಗಿದೆ.

ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ‘ಕಟ್ಟಕಡ’ದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಆರಿಸಿದ್ದಾರೆ. ಸ್ಕೂಟರ್‌ನ ಬ್ಯಾಟರಿಯಲ್ಲಿನ ಅಸಮರ್ಪಕ ಕಾರ್ಯದಿಂದ ಈ ಅವಘಡ ಸಂಭವಿಸಿರಬಹುದು ಎಂದು ಪಾಥಮಿಕ ವರದಿಗಳು ಹೇಳಿವೆ.

ಇತ್ತೀಚೆಗೆ ಕಲಬುರ್ಗಿಯಲ್ಲಿ ಓಲಾ ಗಾಡಿಯನ್ನು ಖರೀದಿಸಿದ ಗ್ರಾಹಕರೊಬ್ಬರು ಆಗಾಗ್ಗೆ ಸಮಸ್ಯೆಗಳನ್ನು ಎದುರಿಸಿ ಹಲವು ಬಾರಿ ಶೋರೂಮ್ ಗೆ ಭೇಟಿ ನೀಡಿದ್ದರೂ ಶೋರೂಂ ಸಿಬ್ಬಂದಿಗಳು ಸಮಸ್ಯೆ ಬಗೆಹರಿಸಿಲ್ಲವೆಂದು ಶೋ ರೂಂ ಗೆ ಬೆಂಕಿ ಹಚ್ಚಿದ್ದರು.

ಅದಲ್ಲದೇ ಮೊನ್ನೆಯಷ್ಟೇ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಕೂಡ ಓಲಾ ಸ್ಕೂಟರ್‌ಗಳ ಸಮಸ್ಯೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ಇದರಿಂದ ಓಲಾ ಸಿಇಒ ಭವೀಶ್ ಅಗರ್ವಾಲ್ ಅವರು ಹಾಗೂ ಕುನಾಲ್ ಕಮ್ರಾ ನಡುವೆ ಭಾರಿ ಮಾತಿನ ಚಕಮಕಿ ನಡೆದಿತ್ತು.