Chennai Air Show 2024: ಭಾರತೀಯ ವಾಯುಸೇನೆ ಏರ್ಪಡಿಸಿದ್ದ ಏರ್ ಶೋ ನಲ್ಲಿ… Read more
ಚೆನ್ನೈ ನ ಮರೀನ ಬೀಚ್‌ನಲ್ಲಿ ಭಾನುವಾರ ನಡೆದ ಭಾರತೀಯ ವಾಯುಪಡೆಯ ಏರ್ ಶೋನಲ್ಲಿ 5 ಜನ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಜನರನ್ನು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 150 ಕ್ಕೂ ಅಧಿಕ ಮಂದಿಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆಯೆಂದು ಹಿರಿಯ ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ವಾಯುಸೇನೆಯ 92 ನೇ ವಾರ್ಷಿಕೋತ್ಸವದ ಅಂಗವಾಗಿ ಚೆನ್ನೈ ನ ಮರೀನಾ ಬೀಚ್ ನಲ್ಲಿ ವಾಯುಪಡೆಯು ಏರ್ ಶೋ ಏರ್ಪಡಿಸಿತ್ತು. ಈ ಪ್ರದರ್ಶನಕ್ಕೆ ಬರೊಬ್ಬರಿ 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು ಎನ್ನಲಾಗಿದೆ.
ಏರ್ ಶೋ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಮರೀನ ಬೀಚ್ ತೀರದುದ್ದಕ್ಕೂ ಸೇರಿದ್ದ ಜನ ಕನಿಷ್ಠ 2 ರಿಂದ 3 ಘಂಟೆಗಳ ಕಾಲ ಸುಡು ಬಿಸಿಲಿನಲ್ಲಿ ನಿಂತಿದ್ದರು. ಹೀಟ್ ಸ್ರೋಕ್‌ನಿಂದಾದ ನಿರ್ಜಲೀಕರಣ, ನಿಶ್ಯಕ್ತಿಯಿಂದ ಈ ಘಟನೆ ಸಂಭವಿಸಿದೆಯೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಹಾಗೂ ವರದಿಯಾಗಿದೆ.
ಮಧ್ಯಾಹ್ನ 1 ಘಂಟೆಗೆ ಪ್ರದರ್ಶನ ಮುಗಿದ ನಂತರ ಮೆಟ್ರೋ, ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಆಗಮಿಸಿದ್ದ ಜನ , ಪ್ರದರ್ಶನ ಮುಗಿದ ನಂತರ ಹೊರಡುವ ದಾವಂತವು ಇನ್ನಷ್ಟು ಜನ ದಟ್ಟಣೆ ಉಂಟಾಗಿ ಜನ ಅವ್ಯವಸ್ಥೆಯಲ್ಲಿ ಸಿಲುಕಿಕೊಳ್ಳಲು ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
- IPL Auction 2025: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ! ನಾಯಕನ ಹುಡುಕಾಟದಲ್ಲಿ ಆರ್ಸಿಬಿ!
- ನಾಳೆ ರಿಲೀಸ್ ಆಗಬೇಕಿದ್ದ ‘Nayanthara: Beyond the Fairy Tale’ ಡಾಕ್ಯುಮೆಂಟರಿಗೆ ನೈಟ್ಮೇರ್ ಆದ ನಟ ಧನುಷ್. ಧನುಷ್ಗೆ ಬಹಿರಂಗ ಪತ್ರ ಬರೆದ ನಟಿ ನಯನತಾರಾ. 10 ಕೋಟಿ ಬೇಡಿಕೆಯಿಟ್ಟ ನಟ ಧನುಷ್!
- ಭಾರತದ ISRO ಜೊತೆ ಕೈ ಜೋಡಿಸಿದ SpaceX. ಸ್ಪೇಸ್ ಎಕ್ಸ್ ನ Falcon 9 ರಾಕೆಟ್ನಲ್ಲಿ ಉಡಾವಣೆಯಾಗಲು ಸಜ್ಜಾಗಿದೆ ಭಾರತದ GSAT-20 ಉಪಗ್ರಹ!
- ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!
- ಡೆಹ್ರಾಡೂನ್ ಕಾರ್ ಆಕ್ಸಿಡೆಂಟ್: 6 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು. ಭೀಕರ ಅಪಘಾತದ ತೀವ್ರತೆಯನ್ನು ತೋರಿಸುತ್ತಿರುವ ಕಿತ್ತು ಹೋದ ಕಾರಿನ ಸನ್ರೂಫ್!