RCB - Royal Challengers bangalore

Home » ಕ್ರೀಡಾ ಸುದ್ದಿ » RCB ಯ Go Green Initiative: ಬೆಂಗಳೂರಿನ 2 ಕೆರೆಗಳಿಗೆ ಜೀವಕಳೆ!

RCB (Royal Challengers Bangalore) ತನ್ನ ಭಾಗವಾದ ಗೋ ಗ್ರೀನ್ ಇನಿಷಿಯೇಟಿವ್ ಮೂಲಕ ಬೆಂಗಳೂರಿನ ಎರಡು ಕೆರೆಗಳ ಪುನರುಜ್ಜೀವನ ಮಾಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಹೊಸ ಗುರಿಯನ್ನು ಆರಂಭಿಸಿದೆ.

RCB: ವಿಶ್ವದಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಇದೀಗ ಪರಿಸರ ಉಳಿವಿನತ್ತ ಹೊಸ ಹೆಜ್ಜೆಯಿಟ್ಟಿದೆ. ಬೆಂಗಳೂರಿನ ಇಟ್ಟಗಲ್ಪುರ ಮತ್ತು ಸಾದೇನಹಳ್ಳಿಯಲ್ಲಿರು ಕೆರೆಗಳ ಜೀರ್ಣೋದ್ಧಾರವನ್ನು ಪೂರ್ಣಗೊಳಿಸಿದೆ.

RCB's Go Green Initiative

‘ಆರ್‌ಸಿಬಿಯ ಗೋ ಗ್ರೀನ್ ಇನಿಶಿಯೇಟಿವ್ (Go Green Initiative) 2011 ರಲ್ಲಿ ಪ್ರಾರಂಭವಾದಾಗಿನಿಂದ, ಭವಿಷ್ಯದ ಪೀಳಿಗೆಗೆ ಪ್ಲಾನೆಟ್ ಅರ್ಥ್ ಅನ್ನು ಆರೋಗ್ಯಕರ ಸ್ಥಳವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ!

2024 ರಲ್ಲಿ, ಆರ್‌ಸಿಬಿ ‘India Cares Foundation’ ಮತ್ತು ‘Friends Of Lakes’ ಸಹಭಾಗಿತ್ವದಲ್ಲಿ ಬೆಂಗಳೂರಿನ ಇಟ್ಟಗಲ್ಪುರ ಮತ್ತು ಸಾದೇನಹಳ್ಳಿ ಕೆರೆಗಳ ಪುನರುಜ್ಜೀವನವನ್ನು ಪ್ರಾರಂಭಿಸಿತು. ಮತ್ತು ಇಂದು, ನಾವು ಯೋಜನೆಯ ಪೂರ್ಣಗೊಳಿಸುವಿಕೆಯನ್ನು ಗುರುತಿಸುತ್ತೇವೆ.” ಎಂದು ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ ನಲ್ಲಿ ಬರೆದುಕೊಂಡಿದೆ.

View Instagram Post 👉 https://www.instagram.com/reel/DAuqbv5sZ

ಆರ್‌ಸಿಬಿಯ ಉಪಾಧ್ಯಕ್ಷರಾಗಿರುವ ರಾಜೇಶ್ ಮೆನನ್ ಮಾತನಾಡಿ, ‘ನಾವು 2023 ರಲ್ಲಿ ಆರಂಭಿಸಿದ ಕೆರೆಗಳ ಪುನರುಜ್ಜೀವನ ಕಾರ್ಯವು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವದಿಂದ ಬರ ಪರಿಸ್ಥಿತಿಯನ್ನು ನಿವಾರಿಸುವುದಾಗಿತ್ತು, ಈ ಪ್ರದೇಶಗಳಲ್ಲಿ ನೈರ್ಸಗಿಕ ನೀರಿನ ಕೊರತೆಯುಂಟಾಗಿತ್ತು. ಜನ ಕೇವಲ ಅಂರ್ತಜಲ ನೀರಿನ ಮೇಲೆ ಅವಲಂಭಿತರಾಗಿದ್ದರು,

ಈ ಯೋಜನೆಗೆ ‘India Cares Foundation’ ಮತ್ತು ‘Friends Of Lakes ‘ ನ ಸಹಭಾಗಿತ್ವದೊಂದಿಗೆ ನಾಂದಿ ಹಾಡಿತ್ತು. ಸುಮಾರು 300 ದಿನದ ಅವಧಿಯಲ್ಲಿ, 50,000 ಟನ್‌ಗಳಿಗಿಂತ ಹೆಚ್ಚು ಹೂಳು ಹಾಗೂ ಮರಳನ್ನು ಕೆರೆಯಿಂದ ತೆಗೆಯಲಾಯಿತು. ಅಲ್ಲಿನ ರೈತರು ಈ ತೆಗೆದುಹಾಕಿದ ಹೂಳನ್ನು ತಮ್ಮ ತೋಟಗಳಿಗೆ ಮರುಬಳಕೆ ಮಾಡುವ ಮೂಲಕ ಪ್ರಯೋಜನ ಪಡೆದುಕೊಂಡಿರುವುದಾಗಿ ತಿಳಿಸಿದರು.

RCB's Go Green Initiative

ಆರ್‌ಸಿಬಿ ತನ್ನ ಯೋಜನೆಯನ್ನು ಕೇವಲ ಕೆರೆಗಳನ್ನು ಮರುಸ್ಥಾಪಿಸಲಷ್ಟೇ ಸೀಮಿತಗೊಳಿಸಲ್ಲಿಲ್ಲ, ಅದರೊಂದಿಗೆ 3000ಕ್ಕೂ ಹೆಚ್ಚು ಮರಗಳನ್ನು ಕೆರೆಯ ಸುತ್ತಲೂ ನೆಟ್ಟು ಅತೀವೃಷ್ಠಿಯಾದಾಗ ಮಣ್ಣಿನ ಸವಕಳಿಯನ್ನು ತಪ್ಪಿಸಲು ಹಾಗೂ ಸುತ್ತಲೂ ಪ್ರದೇಶಕ್ಕೆ ಹಸಿರಿನ ಸ್ಪರ್ಶವನ್ನು ನೀಡಲು ಉತ್ತೇಜಿಸಿರುವುದಾಗಿ’ ತಮ್ಮ ಯೋಜನೆಯ ಮಾಹಿತಿಯನ್ನು ತಿಳಿಸಿದರು.

2011 ರಲ್ಲಿ ಪ್ರಾರಂಭವಾಗಿದ್ದ ಆರ್‌ಸಿಬಿಯ ಭಾಗವಾಗಿರುವ ಈ ದೀರ್ಘಾವಧಿಯ ಗೋ ಗ್ರೀನ್ ಇನಿಷಿಯೇಟಿವ್ ಯೋಜನೆಯು ಕ್ರಿಕೆಟ್ ಮೈದಾನದ ಆಚೆಗೂ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಸುಸ್ಥಿರತೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.