ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯು (CDCSO – Central Drugs Standards Control Organization) ಔಷಧಗಳ ಕುರಿತು ಆಗಸ್ಟ್ ತಿಂಗಳ ವರದಿಯಲ್ಲಿ ಒಟ್ಟು 48 ಔಷಧ ಮಾತ್ರೆಗಳ ಪಟ್ಟಿ ಬಿಡುಗಡೆಮಾಡಿದ್ದು, ಇವು ‘ಪ್ರಮಾಣಿತ ಗುಣಮಟ್ಟ’ವನ್ನು ಹೊಂದಿಲ್ಲವೆಂದು ಎಚ್ಚರಿಸಿದೆ. ಈ ಪಟ್ಟಿಯಲ್ಲಿ ಮಾತ್ರೆಗಳ ಹೆಸರು, ಉತ್ಪಾದನಾ ದಿನಾಂಕ, ಮುಕ್ತಾಯ ಅವಧಿಯ ದಿನಾಂಕ ಹಾಗೂ ಔಷಧ ಉತ್ಪಾದಕ ಕಂಪೆನಿಯ ವಿವರಗಳೊಳಗೊಂಡಿದೆ.
ವಿಟಮಿನ್ ಬಿ, ಸಿ, ಡಿ3 ಒಳಗೊಂಡತೆ, ಪ್ಯಾನ್-ಡಿ, ಪ್ಯಾರೆಸಿಟಮಾಲ್, ರಕ್ತದೊತ್ತಡ (ಬಿಪಿ) ಔಷಧಿಗಳು, ಮಧುಮೇಹ ನಿಯಂತ್ರಣಕ್ಕೆ ಬಳಸುವ ಔಷಧಗಳು, ವಿಟಮಿನ್‌ಗಳು ಮತ್ತು ಕ್ಯಾಲ್ಸಿಯಂ ಪೂರಕಗಳು ಹಾಗೂ ಇತರ ಮಾತ್ರೆಗಳು ಗುಣಮಟ್ಟದ ಪರೀಕ್ಷೆಯಲ್ಲಿ ಅನರ್ಹಗೊಂಡಿವೆ.
ಗುಜರಾತ್, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉತ್ಪಾದಿಸುವ ಔಷಧ ಕಂಪೆನಿಗಳು ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿವೆ.
ಅನರ್ಹಗೊಂಡ ಔಷಧಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ, ಪರೀಕ್ಷಿಸಿ.
ಅದರಲ್ಲಿಯೂ ಬೆಂಗಳೂರಿನ ಪೀಣ್ಯದಲ್ಲಿರುವ “ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್” ನಲ್ಲಿ ಉತ್ಪಾದನೆಯಾಗುವ “ಪ್ಯಾರಸಿಟಮಾಲ್ IP 500 mg ” ಕೂಡ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ. ಇದರೊಂದಿಗೆ ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್, ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೊರೇಟರೀಸ್ ಇನ್ನು ಹಲವು ಉತ್ಪಾದನಾ ಕಂಪೆನಿಗಳು ಅನರ್ಹ ಪಟ್ಟಿಯಲ್ಲಿವೆ.
ಅದೇನೆ ಇದ್ದರು ಇತ್ತೀಚೆಗೆ ತಿರುಪತಿಯ ಲಡ್ಡುವಿಗೆ ಬಳಸಿದ ತುಪ್ಪದಲ್ಲೂ ಕಲಬೆರಕೆ ಕಂಡುಬಂದಿತ್ತು, ಈಗ ಅನಾರೋಗ್ಯಕ್ಕೆ ಸೇವಿಸುವ ಔಷಧಗಳಲ್ಲಿಯು ಗುಣಮಟ್ಟದ ಕೊರತೆ ಕಂಡುಬರುತ್ತಿದ್ದು ಜನರು ಕೊಂಚ ಎಚ್ಚರಿಕೆಯಿಂದ ಆಹಾರ, ಔಷಧಗಳು ಸೇವಿಸುವುದು ಅಗತ್ಯವಾಗಿದೆ.