‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯು ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಬಹುಮುಖ ಪ್ರತಿಭೆಗೆ ಹೆಸರಾದ ಹಿರಿಯ ನಟ ಹಾಗೂ ರಾಜ್ಯಸಭಾದ ಮಾಜಿ ಸದಸ್ಯರಾದ ಮಿಥುನ್ ಚಕ್ರವರ್ತಿಯವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ . ಇದೇ ಅಕ್ಟೋಬರ್ 8 ರಂದು ನಡೆಯುತ್ತಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಚಕ್ರವರ್ತಿ ಅವರು 1976 ರಲ್ಲಿ ಮೃಣಾಲ್ ಸೇನ್ ಅವರ ‘ಮೃಗಯಾ’ ಚಲನಚಿತ್ರ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಸಿನಿಮಾದಲ್ಲೇ ಅವರ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು.
ಮಿಥುನ್ ಚಕ್ರವರ್ತಿಯವರು ಇದುವರೆಗೆ 3 ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ (National Film Award) ಮತ್ತು 2 (Filmfare Award) ‘ಫಿಲ್ಮ್ಫೇರ್ ಪ್ರಶಸ್ತಿ’ಗಳನ್ನು ಪಡೆದಿದ್ದಾರೆ. ಜನವರಿ 2024 ರಲ್ಲಿ, ಚಕ್ರವರ್ತಿ ಅವರಿಗೆ ಭಾರತ ಸರ್ಕಾರವು ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣವನ್ನು ನೀಡಿತ್ತು.
1989 ರಲ್ಲಿ ಒಟ್ಟು 19 ಚಲನಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ ಬಿಡುಗಡೆಯಾಗಿದಕ್ಕಾಗಿ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲೆಯನ್ನು ಬರೆದಿದ್ದಾರೆ ಮತ್ತು ಇದುವರೆಗೂ ಬಾಲಿವುಡ್‌ನಲ್ಲಿ ಈ ದಾಖಲೆಯನ್ನು ಯಾರಿಂದಲೂ ಮುರಿಯಲಾಗಿಲ್ಲ.
ಕೇಂದ್ರ ಸಚಿವ ‘ಅಶ್ವಿನಿ ವೈಷ್ಣವ್’ ಅವರು ‘ಮಿಥುನ್ ಅವರ ಸಿನಿ ಪಯಣವು ಎಲ್ಲಾ ಪೀಳಿಗೆಗೂ ಸ್ಪೂರ್ತಿ, ೭೦ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುವುದು’ ಎಂದು ಶ್ಲಾಘಿಸಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ‘ಶ್ರೀ ಮಿಥುನ್ ಚಕ್ರವರ್ತಿ ಜಿ ಅವರಿಗೆ ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಗಳನ್ನು ಗುರುತಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿರುವುದು ಸಂತೋಷವಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಶುಭಕೋರಿದ್ದಾರೆ.
- IPL Auction 2025: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ! ನಾಯಕನ ಹುಡುಕಾಟದಲ್ಲಿ ಆರ್ಸಿಬಿ!
- ನಾಳೆ ರಿಲೀಸ್ ಆಗಬೇಕಿದ್ದ ‘Nayanthara: Beyond the Fairy Tale’ ಡಾಕ್ಯುಮೆಂಟರಿಗೆ ನೈಟ್ಮೇರ್ ಆದ ನಟ ಧನುಷ್. ಧನುಷ್ಗೆ ಬಹಿರಂಗ ಪತ್ರ ಬರೆದ ನಟಿ ನಯನತಾರಾ. 10 ಕೋಟಿ ಬೇಡಿಕೆಯಿಟ್ಟ ನಟ ಧನುಷ್!
- ಭಾರತದ ISRO ಜೊತೆ ಕೈ ಜೋಡಿಸಿದ SpaceX. ಸ್ಪೇಸ್ ಎಕ್ಸ್ ನ Falcon 9 ರಾಕೆಟ್ನಲ್ಲಿ ಉಡಾವಣೆಯಾಗಲು ಸಜ್ಜಾಗಿದೆ ಭಾರತದ GSAT-20 ಉಪಗ್ರಹ!
- ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!
- ಡೆಹ್ರಾಡೂನ್ ಕಾರ್ ಆಕ್ಸಿಡೆಂಟ್: 6 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು. ಭೀಕರ ಅಪಘಾತದ ತೀವ್ರತೆಯನ್ನು ತೋರಿಸುತ್ತಿರುವ ಕಿತ್ತು ಹೋದ ಕಾರಿನ ಸನ್ರೂಫ್!