Govinda shot himself
Home » ಟ್ರೆಂಡಿಂಗ್ ನ್ಯೂಸ್ » ರಿವಾಲ್ವರ್ ಮಿಸ್ ಫೈರ್! ಆಗಿ ಗುಂಡು ತಗುಲಿ ನಟ ಗೋವಿಂದ ಆಸ್ಪತ್ರೆಗೆ ದಾಖಲು!

ಇಂದು ಬೆಳಗ್ಗೆ 4.45 ರ ಸುಮಾರಿಗೆ ನಟ ಗೋವಿಂದ ಅವರು ಕೊಲ್ಕತ್ತಾಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ತಲುಪಲು ತಯಾರಾಗುತ್ತಿದ್ದ ಸಂದರ್ಭದಲ್ಲಿ ತಮ್ಮ ರಿವಾಲ್ವರನ್ನು ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಲು ಹೋದಾಗ ಗುಂಡು ತಗುಲಿ ತಮ್ಮ ಮೊಣಕಾಲಿನ ಕೆಳಗೆ ಗಾಯಮಾಡಿಕೊಂಡಿದ್ದಾರೆ.

ಘಟನೆ ಸಂಭವಿಸಿದ ಸಮಯದಲ್ಲಿ ತಾವೊಬ್ಬರೇ ತಮ್ಮ ‘ಜುಹು ನಿವಾಸ’ದಲ್ಲಿದ್ದು, 6 ಘಂಟೆಗೆ ಅವರ ವಿಮಾನವಿರುವುದಾಗಿಯು, ಕೊಲ್ಕತ್ತಾಗೆ ಕಾರ್ಯಕ್ರಮ ನಿಮಿತ್ತ ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ದರಾಗಿರುವಾಗ ಈ ಘಟನೆ ನಡೆದುದಾಗಿ ನಟ ಗೋವಿಂದರವರ ಮ್ಯಾನೇಜರ್ ಶಶಿ ಸಿನ್ಹಾ ತಿಳಿಸಿದ್ದಾರೆ. ಜೊತೆಗೆ ಕಾಲಿನಿಂದ ಗುಂಡು ತೆಗೆಯಲಾಗಿದೆ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಸದ್ಯ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಹಾಗೂ ಶಿವ ಸೇನೆಯ ನಾಯಕರಾದ ಗೋವಿಂದ ಅವರು ‘ನನಗೆ ಗುಂಡು ತಗುಲಿದೆ, ಅದನ್ನು ಹೊರತೆಗೆಯಲಾಗಿದೆ. ವೈದ್ಯರು, ನನ್ನ ಹೆತ್ತವರ ಹಾಗೂ ನಿಮ್ಮೆಲ್ಲರ ಪ್ರಾರ್ಥನೆಗಳಿಗೆ ಧನ್ಯವಾದಗಳು’ ಎಂದು ಆಡಿಯೋ ಕ್ಲಿಪ್ ಮೂಲಕ ತಿಳಿಸಿದ್ದಾರೆ.