Sadguru case
Home » ಟ್ರೆಂಡಿಂಗ್ ನ್ಯೂಸ್ » ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ ಸದ್ಗುರು ಕೇಸ್!

ಈಶಾ ಫೌಂಡೇಶನ್‌ಗೆ ಸಂಬಂಧಿಸಿದ ಕೇಸನ್ನು ಮದ್ರಾಸ್ ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್ ತನಗೆ ವರ್ಗಾಯಿಸಿಕೊಂಡಿದೆ.

ಏನಿದು ಪ್ರಕರಣ?
ಗೀತಾ ಹಾಗೂ ಲತಾ ಎಂಬ ಇಬ್ಬರು ಹೆಣ್ಣುಮಕ್ಕಳ ತಂದೆಯಾದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಸ್ ಕಾಮರಾಜ್ ಅವರು ‘ಈಶಾ ಫೌಂಡೇಶನ್’ನ ಸ್ಥಾಪಕರಾದ ಜಗ್ಗಿ ವಾಸುದೇವ್ ಅವರು ತಮ್ಮ ಹೆಣ್ಣುಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಸನ್ಯಾಸಿಗಳಂತೆ ಬದುಕಲು ಕೊಯಮತ್ತೂರಿನ ಈಶಾ ಫೌಂಡೇಶನ್ ಇರಿಸಿಕೊಂಡಿದೆ ಎಂದು ಸದ್ಗುರು ವಿರುದ್ಧ ಮದ್ರಾಸ್ ಹೈಕೋರ್ಟಿಗೆ ‘ಹೇಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸಿದ್ದರು ಹಾಗೂ ಈಶಾ ಫೌಂಡೇಶನ್ ವಿರುದ್ಧ ಹಲವಾರು ಕ್ರಿಮಿನಲ್, ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಪ್ರಕರಣಗಳು ಬಾಕಿ ಇವೆ ಎಂದು ನ್ಯಾಯಾಲಯದಲ್ಲಿ ಆರೋಪಿಸಿದ್ದರು.

Supreme Court transfers case against Sadhguru from Madras high court

ಇದರ ಸಂಬಂಧವಾಗಿ ಮದ್ರಾಸ್ ಹೈಕೋರ್ಟ್ ‘ಸದ್ಗುರು ತನ್ನ ಮಗಳಿಗೆ ಮದುವೆ ಮಾಡಿಸಿ, ಬೇರೆ ಹೆಣ್ಣುಮಕ್ಕಳಿಗೆ ಏಕೆ ಸನ್ಯಾಸತ್ವ ತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಸೆ.30 ರಂದು ನಡೆದ ವಿಚಾರಣೆಯಲ್ಲಿ ಅಸಮಧಾನ ವ್ಯಕ್ತಪಡಿಸಿ, ಈಶಾ ಫೌಂಡೇಶನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳನ್ನು ತನ್ನ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರ್ ಪೋಲೀಸರಿಗೆ ಆದೇಶಿಸಿತ್ತು.

ಇದರ ಬೆನ್ನಲ್ಲೇ ಸುಮಾರು 150 ಪೋಲೀಸ್ ಸಿಬ್ಬಂದಿಗಳು ಕೊಯಮತ್ತೂರಿನ ಈಶಾ ಫೌಂಡೇಶನ್ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿ ಆಶ್ರಮದ ಕಾರ್ಯಕರ್ತರ ಬಳಿ ಮಾಹಿತಿ ಸಂಗ್ರಹಿಸಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರೂ ಯುವತಿಯರು ‘ತಾವು ಸ್ವ ಇಚ್ಚೆಯಿಂದ ಈಶಾ ಫೌಂಡೇಶನ್ ನಲ್ಲಿ ಇರುವುದಾಗಿ, ಯಾರೂ ಬಂಧಿಸಿಲ್ಲವೆಂದು ಹೇಳಿಕೆ ನೀಡಿದರು.

ಆದರೀಗ ಈ ಪ್ರಕರಣವನ್ನು ಖುದ್ದು ಸುಪ್ರೀಮ್ ಕೋರ್ಟ್ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಮದ್ರಾಸ್ ಹೈಕೋರ್ಟ್ ಹಾಗೂ ಕೊಯಮತ್ತೂರ್ ಪೋಲೀಸರಿಗೆ ಈ ಕೆಳಗಿನಂತೆ ಆದೇಶಿಸಿದೆ.

  • ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ನಿಂದ ಸುಪ್ರೀಮ್ ಕೋರ್ಟ್ಗೆ ವರ್ಗಾಯಿಸಲಾಗುತ್ತದೆ.
  • ಮೂಲ ಅರ್ಜಿದಾರರು ವರ್ಚುಯಲ್ ಮುಖಾಂತರ ಅಥವಾ ವಕೀಲರ ಮೂಲಕ ಹಾಜರಿರತಕ್ಕದ್ದು.
  • ಪೋಲೀಸರು ಇಲ್ಲಿಯವರೆಗೆ ದಾಖಲಿಸಿಕೊಂಡ ಎಲ್ಲಾ ವರದಿಗಳನ್ನು ಸುಪ್ರೀಮ್ ಕೋರ್ಟ್ಗೆ ಸಲ್ಲಿಸತಕ್ಕದ್ದು.
  • ಕೋರ್ಟಿನ ಆದೇಶದ ಹೊರೆತು ಪೋಲೀಸರು ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ.