Kerala Fire: ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂನ ಅಂಜುತಂಬಲಂ ವೀರೆರ್ಕಾವು ದೇವಸ್ಥಾನದಲ್ಲಿ ಮಂಗಳವಾರ ಬೆಳಗಿನ ಜಾವ ನಡೆಯುತ್ತಿದ್ದ ತೆಯ್ಯಂ ಉತ್ಸವದ ಸಂದರ್ಭದಲ್ಲಿ ಪಟಾಕಿಯಿಂದ ಬೆಂಕಿ ಅವಘಡದಲ್ಲಿ 150 ಕ್ಕೂ ಹೆಚ್ಚು ಮಂದಿಗೆ ಶೇಕಡ. 80 ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ.
ಕೇರಳ ಹಾಗೂ ಕರ್ನಾಟಕದ ಕಾಸರಗೋಡು ಭಾಗದಲ್ಲಿ ಹೆಚ್ಚು ಆಚರಿಸುವ ಪ್ರಸಿದ್ಶವಾದ (Theyyam Festival) ತೆಯ್ಯಂ ಉತ್ಸವದ ಆಚರಣೆಯಲ್ಲಿದ್ದ ಕಾಸರಗೋಡಿನ ಅಂಜುತಂಬಲಂ ವೀರೆರ್ಕಾವು ದೇವಸ್ಥಾನದಲ್ಲಿ ಈಗ ಉತ್ಸವದ ಕಳೆಗುಂದಿದೆ.
ಮಂಗಳವಾರ ಬೆಳಗಿನ ಜಾವ ನಡೆಯುತ್ತಿದ್ದ ತೆಯ್ಯಂ ಉತ್ಸವದಲ್ಲಿ ಉಂಟಾದ ಅಗ್ನಿ ದುರಂತದಲ್ಲಿ ಉತ್ಸವದಲ್ಲಿ ಸೇರಿದ್ದ ಭಕ್ತಾದಿಗಳು ಶೇಕಡ. 80 ಕ್ಕೂ ಹೆಚ್ಚು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಪಟಾಕಿ ಸಿಡಿಸಿದ ನಂತರ ಅದರಿಂದ ಬಂದ ಕಿಡಿಯು ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲಿದ್ದ ಶೆಡ್ನಲ್ಲಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳಿಗೆ ತಾಗಿ ಕ್ಷಣ ಮಾತ್ರದಲ್ಲೇ ಬೆಂಕಿ ಎಲ್ಲೆಡೆ ಆವರಿಸಿ ಈ ದುರ್ಘಟನೆ ನಡೆದುದಾಗಿ ತಿಳಿಸಿದ್ದಾರೆ.
ಉತ್ಸವದ ಕೊನೆಯ ದಿನದವರೆಗೆ ಬೇಕೆಂದು ಸುಮಾರು 25.000 ರೂ. ಮೌಲ್ಯದ ಪಟಾಕಿಯನ್ನು ಶೆಡ್ನಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ನಡೆದುದಾಗಿ ಇಬ್ಬರು ಅಧಿಕಾರಿಗಳನ್ನು ಕೇರಳದ ಪೋಲೀಸರು ಬಂಧಿಸಿದ್ದಾರೆ.
ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಗಾಯಗೊಂಡವರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಕಾಸರಗೋಡು ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದಲ್ಲಿ ಬಿಜೆಪಿ (Bharatiya Janata Party) ಮತ್ತು ಸಿಪಿಎಂ (Communist Party of India) ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ಪಿಟಿಐ (Press Trust Of India) ವರದಿ ಮಾಡಿದೆ.