Shah rukh khan death threat

ಇತ್ತೀಚೆಗೆ ಜೀವ ಬೆದರಿಕೆ, ಬಾಂಬ್ ಬೆದರಿಕೆಗಳು ಬರ್ತಾ ಇರೋದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮಂಗಳವಾರದಂದು ಮುಂಬೈನ ಪೋಲೀಸ್ ಠಾಣೆಗೆ ವ್ಯಕ್ತಿಯೊಬ್ಬ ಕರೆ ಮಾಡಿ, ಶಾರುಖ್ ಖಾನ್… Read more


Shah rukh khan death threat: ಮಂಗಳವಾರ ರಾತ್ರಿ 8 ಘಂಟೆ ಸುಮಾರಿಗೆ ಮುಂಬೈ ಪೋಲೀಸ್ ಠಾಣೆಗೆ ಕರೆ ಮಾಡಿ, ತಾನು ಮುಂಬೈನಲ್ಲಿರುವ ಶಾರುಖ್ ಖಾನ್ ಅವರ ‘ಮನ್ನತ್’ ಮನೆಯ ಬಳಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ಅವರು 50 ಲಕ್ಷ ಕೊಡದಿದ್ದರೆ ಅವರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಪೋಲೀಸರು ಜೀವ ಬೆದರಿಕೆ ನೀಡುತ್ತಿರುವ ಉದ್ದೇಶವನ್ನು ಹಾಗೂ ಆತನ ಬಗ್ಗೆ ವಿಚಾರಿಸಿದಾಗ ‘ಅದರಿಂದ ಏನು ಪ್ರಯೋಜನವಿಲ್ಲ, ನೀವು ಹೆಸರನ್ನು ಉಲ್ಲೇಖಿಸಲೇ ಬೇಕೆಂದರೆ ನನ್ನ ಹೆಸರನ್ನು ಹಿಂದೂಸ್ತಾನಿ ಎಂದು ನಮೂದಿಸಿಕೊಳ್ಳಿ ಎಂದು ಹೇಳಿದ್ದಾನೆ.

ನಂತರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕರೆ ಬಂದಿದ್ದ ಸಂಖ್ಯೆಯ ಜಾಲವನ್ನು ಹುಡುಕಿದಾಗ ಆ ಸಂಖ್ಯೆ ವಕೀಲರಾದ ಫಯಾಜ್ ಖಾನ್ ಎಂಬುವವರದ್ದು ಎಂದು ತಿಳಿದು ಬಂದಿದೆ. ತದನಂತರ ಫಯಾಜ್ ಖಾನ್ ಅವರನ್ನು ವಿಚಾರಿಸಿದಾಗ, ನವೆಂಬರ್ 2 ರಂದು ತಮ್ಮ ಮೊಬೈಲ್ ಕಳೆದುಕೊಂಡಿರುವುದಾಗಿ ಹಾಗೂ ಕಳ್ಳತನದ ದೂರನ್ನು ದಾಖಲಿಸಿರುವುದಾಗಿ ಹೇಳಿದ್ದಾರೆ. ಯಾರೋ ತಮ್ಮ ಮೋಬೈಲ್ ಸಂಖ್ಯೆಯನ್ನು ದುರುಪಯೋಗ ಪಡೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ತನಿಖೆಯ ಸಂದರ್ಭದಲ್ಲಿ ವಕೀಲರಾದ ಫಯಾಜ್ ಖಾನ್ ಹಿಂದೊಮ್ಮೆ ಶಾರುಖ್ ಖಾನ್ ವಿರುದ್ದ ದೂರು ದಾಖಲಿಸಿದ್ದುದ್ದಾಗಿ ಹೇಳಿದ್ದಾರೆ. 1994 ರಲ್ಲಿ ಬಿಡುಗಡೆಯಾಗಿದ್ದ ‘ಅಂಜಾಮ್’ ಸಿನೆಮಾದಲ್ಲಿ ನಟಿಸಿದ್ದ ಶಾರುಖ್ ಖಾನ್ ಒಂದು ದೃಶ್ಯದಲ್ಲಿ ತನ್ನ ಸೇವಕನಿಗೆ ತಮ್ಮ ವಾಹನದಲ್ಲಿದ್ದ ಜಿಂಕೆಯ ದೇಹವನ್ನು ತೋರಿಸುವುದರ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ್ದಾರೆಂದು ಮುಂಬೈನ ಬಾಂದ್ರಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ತಮಗೆ ಬಿಷ್ಣೋಯ್ ಸಮುದಾಯದಲ್ಲಿ ಬಹಳಷ್ಟು ಸ್ನೇಹಿತರಿದ್ದಾರೆ. ಬಿಷ್ಣೂಯ್ ಸಮುದಾಯದಲ್ಲಿ ಜಿಂಕೆಯನ್ನು ಕೊಲ್ಲುವುದು ಸೇರಿ ಒಟ್ಟು 29 ತತ್ವವನ್ನು ಪಾಲಿಸುತ್ತಾರೆ. ಹಾಗಿರುವಾಗ ಒಬ್ಬ ಮುಸಲ್ಮಾನ ಈ ರೀತಿಯ ದೃಶ್ಯಗಳನ್ನು ಮಾಡಿದರೆ 2 ಸಮುದಾಯದ ಮಧ್ಯೆ ದ್ವೇಷ ಹರಡಿದಂತಾಗಯತ್ತದೆ ಎಂದು ದೂರು ದಾಖಲಿಸಿ ಚಲನಚಿತ್ರವನ್ನು ನಿಷೇಧಿಸುವಂತೆ ಎಫ್‌ಐಆರ್ ಹಾಕಲು ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ.

ಕರೆ ಬಂದಿರುವ ಸಂದರ್ಭದಲ್ಲಿ ಕೋರ್ಟಿನಲ್ಲಿದ್ದೆ ಎಂದು ನನಗೂ ಆ ಕರೆಗೂ ಸಂಬಂಧವಿಲ್ಲವೆಂದು ಫಯಾಜ್ ಖಾನ್ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಪ್ರಕರಣದಲ್ಲೂ ಕೃಷ್ಣಮೃಗ ಕೊಂದಿದ್ದರಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ ಜೀವ ಬೆದರಿಕೆ ಹಾಕಿದ್ದ. ಇದೀಗ ಶಾರುಖ್ ಖಾನ್ ಸಹ ಜೀವ ಬೆದರಿಕೆ ಎದುರಿಸುತ್ತಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಶಾರುಖ್ ಖಾನ್ ಅವರ ೨೦೨೩ರಲ್ಲಿ ಬಿಡುಗಡೆಯಾಗಿದ್ದ ಪಠಾಣ್ ಮತ್ತು ಜವಾನ್ ಸಿನೆಮಾಗಳ ನಂತರ ಜೀವ ಬೆದರಿಕೆಗಳು ಬರುತ್ತಿದ್ದವೆಂದು ಅಕ್ಟೋಬರ್‌ನಲ್ಲಿ ನಟನಿಗೆ Y+ ಸೆಕ್ಯೂರಿಟಿ ಒದಗಿಸಲಾಗಿತ್ತು.