Cyclone Dana

Dana Cyclone: ಪೂರ್ವ-ಮಧ್ಯ ಬಂಗಾಳಕೊಲ್ಲಿಯ ಮೇಲೆ ಹಾಗೂ ಅಂಡಮಾನ್ ಉತ್ತರ ಪ್ರದೇಶದಲ್ಲಿ ಕಡಿಮೆ ಒತ್ತಡ ಉಂಟಾಗಿರುವುದರಿಂದ ಅ. 22 ಮಂಗಳವಾರದ ಬೆಳಗಿನ ವೇಳೆಗೆ ಪಶ್ಚಿಮ ವಾಯುವ್ಯಕ್ಕೆ ಚಲಿಸುವುದರಿಂದ ಅ. 23 ಬುಧವಾರದ ಹೊತ್ತಿಗೆ ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.


ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ತೀವ್ರ ಚಂಡಮಾರುತದಿಂದ ಭಾರಿ ಮಳೆಯಾಗಲಿರುವ ಕಾರಣ ಮುನ್ನೆಚರಿಕೆಯ ಕ್ರಮವಾಗಿ ಈ ಪ್ರದೇಶಗಳ ಮೇಲೆ ನಿಗಾ ಇರಿಸಲಾಗಿದೆ. ಅ. 24 ಮತ್ತು ಅ. 25 ರಂದು ಅತೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಸೂಚಿಸಲಾಗಿದೆ.

ಒಡಿಶಾದಲ್ಲಿ ಅ. 23 ರ ಸಂಜೆ ವೇಳೆ ಭಾರಿ ಮಳೆಯಾಗಲಿದೆ. ಅ. 24, 25 ರಂದು 7-20 ಸೆ.ಮೀ ಹಾಗೂ ಕೆಲವು ಪ್ರದೇಶಗಳಲ್ಲಿ 30 ಸೆ.ಮೀ ಗಿಂತ ಜಾಸ್ತಿ ಮಳೆಯಾಗುವ ಸಂಭವಿದೆ. ಅ. 24 ರಂದು ಚಂಡಮಾರುತದ ಗರಿಷ್ಠ ಗಾಳಿಯ ವೇಗ ಘಂಟೆಗೆ 100-120 ಕಿ.ಮೀ ವೇಗ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಮ್ ಮೋಹಪಾತ್ರ ತಿಳಿಸಿದ್ದಾರೆ.

Cyclone Dana Update

ಚಂಡಮಾರುತದ ಪರಿಣಾಮ ಅ. 21 ರಿಂದ 23 ರ ವರೆಗೆ ಕೇರಳ ಮತ್ತು ಮಾಹೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಮತ್ತು ಅ.22 ಮತ್ತು ಅ. 23 ರಂದು ತಮಿಳುನಾಡು, ಪಾಂಡಿಚೆರಿ ಮತ್ತು ಕರೈಕಲ್ ಹಾಗೂ ಅ. 24, 25 ರಂದು ಆಂಧ್ರಪ್ರದೇಶದ ಕರಾವಳಿ ಭಾಗ ಮತ್ತು ಯಾನಂ ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ವರದಿ ಹೇಳಿದೆ.

ಕಳೆದ 24 ಘಂಟೆಗಳಲ್ಲಿ ಕರ್ನಾಟಕದ ಕರಾವಳಿ ಪ್ರದೇಶಗಳಾದ ಕದ್ರಾ (11), ಕುಂದಾಪುರ (9), ಮುಂಡಗೋಡು (8), ಕಾರವಾರ (7) ಸೆ.ಮೀ ಮಳೆಯಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಾದ ಹೊನ್ನಾಳಿ (8), ಶಿವಮೊಗ್ಗ (7), ಚಿತ್ರದುರ್ಗ (7), ಆನವಟ್ಟಿ (7) ಸೆ.ಮೀ ಮಳೆಯಾಗಿದೆ. ಮತ್ತು ಉತ್ತರ ಕರ್ನಾಟಕದ ಕರ್ನಾಟಕದ ಹಾವೇರಿ ಜಿಲ್ಲೆಯ ಶಿಗ್ಗಾಂವ್‌ನಲ್ಲಿ 10 ಸೆ.ಮೀ ಮಳೆಯಾಗಿದೆ.


ಇನ್ನಷ್ಟು ಸುದ್ದಿಗಳು: