Raj shekhawat karni sena

Lawrence Bishnoi ಎನ್‌ಕೌಂಟರ್ ಮಾಡಿದವರಿಗೆ 1,11,11,111 ರೂ. ಕೊಡುವುದಾಗಿ ಕ್ಷತ್ರಿಯ ಕರ್ಣಿ ಸೇನೆಯ ರಾಷ್ತ್ರೀಯ ಅಧ್ಯಕ್ಷರಾದ ರಾಜ್ ಶೆಖಾವತ್ ವಿಡಿಯೋವೊಂದರಲ್ಲಿ ಹೇಳಿದ್ದಾರೆ.

ಮಹಾರಾಷ್ತ್ರದ ಮಾಜಿ ಸಚಿವ, NCP ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯ ಬಳಿಕ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿತ್ತು. 5 ಕೋಟಿ ರೂ. ಕೊಟ್ಟು ಲಾರೆನ್ಸ್ ಬಿಷ್ಣೊಯ್ ಜೊತೆ ವೈರತ್ವ ಕಳೆದುಕೊಳ್ಳದ್ದಿದ್ದಲ್ಲಿ ಸಲ್ಮಾನ್ ಖಾನ್‌ರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ, ಭಾರತದಾದ್ಯಂತ 700 ಕ್ಕೂ ಹೆಚ್ಚು ಶೂಟರ್‌ಗಳನ್ನು ಬಿಷ್ಣೋಯ್ ಗ್ಯಾಂಗ್ ಹೊಂದಿದೆ.

ಕ್ಷತ್ರಿಯ ಕರ್ಣಿ ಸೇನೆಯ ಅಧ್ಯಕ್ಷರಾಗಿದ್ದ ಸುಖ್‌ದೇವ್ ಸಿಂಗ್ ಗೊಗಮಡಿ ಅವರನ್ನು ಕಳೆದ ವರ್ಷ ಡಿಸೆಂಬರ್ 5 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ಸ್ವಲ್ಪ ಸಮಯದ ನಂತರ ಬಿಷ್ಣೋಯ್ ಗ್ಯಾಂಗ್ ತಾವೇ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿತ್ತು. ಈ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಅವರೇ ಹೊಣೆಗಾರನೆಂದು ವಿಡಿಯೋದಲ್ಲಿ ಕ್ಷತ್ರಿಯ ಕರ್ಣಿ ಸೇನೆಯ ರಾಷ್ತ್ರೀಯ ಅಧ್ಯಕ್ಷರಾದ ರಾಜ್ ಶೆಖಾವತ್ ಆರೋಪಿಸಿದ್ದಾರೆ.

ಸದ್ಯ ಸಲ್ಮಾನ್ ಖಾನ್ ಅವರ ಕೊಲೆಗೆ ಸಂಚು ರೂಪಿಸಿ, ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಮಾದಕವಸ್ತು ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ ಗುಜರಾತಿನ ಸಬರಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡುವ ಪೊಲೀಸ್ ಅಧಿಕಾರಿಗೆ ರಾಜ್ ಶೆಖಾವತ್ 1,11,11,111 ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.


ಇನ್ನಷ್ಟು ಸುದ್ದಿಗಳು: