delhi drug case recent

Home » ಟ್ರೆಂಡಿಂಗ್ ನ್ಯೂಸ್ » Delhi Drug Case : Snack Packet ಗಳಲ್ಲಿ ಸಾಗಿಸುತ್ತಿದ್ದ 2,400 ಕೋಟಿ ಮೌಲ್ಯದ 200 ಕೆಜಿ Cocaine ವಶಪಡಿಸಿಕೊಂಡ ದೆಹಲಿ ಪೋಲೀಸರು.

ದೆಹಲಿ ಪೋಲೀಸರು ಇದೇ ಅ. 3 ರಂದು 5,690 ಕೋಟಿ ಮೌಲ್ಯದ 560 ಕೆಜಿ ಕೊಕೇನ್ ಮತ್ತು 40 ಕೆಜಿ (Hydroponic marijuana) ಹೈಡ್ರೋಫೋನಿಕ್ ಗಾಂಜಾವನ್ನು ದಕ್ಷಿಣ ದೆಹಲಿಯ ಮಹಿಪಾಲೂರ್ ನಲ್ಲಿ ವಶಪಡಿಸಿಕೊಂಡಿದ್ದರು.

ಇದು ಇಲ್ಲಿಯವರೆಗಿನ ಅತೀ ದೊಡ್ಡ ಮಾದಕ ದ್ರವ್ಯದ ಮೇಲೆ ನಡೆದ ದಾಳಿಯಾಗಿತ್ತು. ಇದರ ಬೆನ್ನಲ್ಲೇ ಅ. 10 ರಂದು ನೆನ್ನೆ ಮತ್ತೊಂದು ಮಾದಕ ದ್ರವ್ಯದ ಕಳ್ಳಸಾಗಾಣಿಕೆ ಮೇಲೆ ದಾಳಿ ನಡೆಸಿದ್ದು, ಇಲ್ಲಿಯವರೆಗೆ ಒಟ್ಟು 9,000 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ನೆನ್ನೆ ನಡೆದ ದಾಳಿಯಲ್ಲಿ ಪೋಲೀಸರು Namkeen Snacks ನ 20 ರಿಂದ 25 ಪ್ಯಾಕೇಟ್‌ಗಳಲ್ಲಿ ತುಂಬಿಸಿಟ್ಟಿದ್ದ 200 ಕೆಜಿಯ ಕೊಕೇನ್ ವಶಪಡಿಸಿಕೊಂಡಿದೆ.

ದೆಹಲಿಯ ರಮೇಶ್ ನಗರ ಪ್ರದೇಶದಲ್ಲಿದ್ದ ಚಿಕ್ಕ ಅಂಗಡಿಯಲ್ಲಿ ಇರಿಸಲಾಗಿತ್ತು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. 1 ವಾರದ ಅಂತರದಲ್ಲಿ ನಡೆದ ದೊಡ್ಡ ಮಾದಕ ದ್ರವ್ಯ ದಾಳಿ ಇದಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಕಿಲೋ ಕೊಕೇನ್ ಗೆ 12 ಕೋಟಿ ಇದೆ. ನಾವು ವಶಪಡಿಸಿಕೊಂಡಿರುವ ಕೋಕೇನ್ 208 ಕೆಜಿಯಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 2,080 ರೂ. ಕೋಟಿ ಮೌಲ್ಯವಿದೆ ಎಂದು ಪೋಲೀಸ್ ಅಧಿಕಾರಿ ತಿಳಿಸಿದರು.

ಭಾರತ ಮೂಲದ UK ಪ್ರಜೆ ಕೆಲವು ದಿನಗಳ ಹಿಂದೆ ಅಂಗಡಿಯನ್ನು ಬಟ್ಟೆಯಂಗಡಿ ನಡೆಸುತ್ತೇವೆಂದು ಬಾಡಿಗೆಗೆ ತೆಗೆದುಕೊಂಡಿದ್ದರು ಎಂದು ದಾಳಿಯಾದ ರಮೇಶ್ ನಗರದ ಅಂಗಡಿಯ ಮಾಲೀಕ ಹೇಳಿಕೆ ನೀಡಿದ್ದಾರೆ. ಪೋಲೀಸರು ಬರುವ ಮೊದಲೇ ಆ ಯುಕೆ ಪ್ರಜೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ.

ಈ ಪ್ರಕರಣಕ್ಕೂ ಹಾಗೂ ಹಿಂದೆ ಮಹಿಪಾಲೂರ್‌ ನಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಪ್ರಕರಣಕ್ಕೂ ಸಂಬಂಧವಿದೆ.

ನಾವು ಹಿಂದೆ ಕಾರ್ಯಾಚರಣೆ ನಡೆಸಿ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಕ್ಕ ಸುಳಿವಿನಿಂದ ವಿಶೇಷ ಪೋಲೀಸ್ ಸಿಬ್ಬಂದಿ ತಂಡವು ಈ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೋಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.