karnataka flag hoisting rules

Home » ಟ್ರೆಂಡಿಂಗ್ ನ್ಯೂಸ್ » ಕನ್ನಡ ರಾಜ್ಯೋತ್ಸವ: ಕಡ್ಡಾಯವಾಗಿ ಕರ್ನಾಟಕ ಧ್ವಜವನ್ನು ಹಾರಿಸಲು DCM ಸೂಚನೆ.

ಕನ್ನಡ ರಾಜ್ಯೋತ್ಸದ ಅಂಗವಾಗಿ ನವೆಂಬರ್ 1 ರಂದು ಕಡ್ಡಾಯವಾಗಿ ಕರ್ನಾಟಕದ ಧ್ವಜವನ್ನು ಹಾರಿಸಲು ಎಲ್ಲಾ ಶಿಕ್ಷಣ ಸಂಸ್ಥೆಗಳು, ಐಟಿ ಕಂಪೆನಿಗಳು ಹಾಗೂ ಕಾರ್ಖಾನೆಗಳಿಗೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.

PTI (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ) ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಎಲ್ಲಾ ಐಟಿ ಕಂಪೆನಿ, ಶಿಕ್ಷಣ ಸಂಸ್ಥೆಗಳು ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ತಮ್ಮ ತಮ್ಮ ಸಂಸ್ಥೆಗಳಲ್ಲಿ ಕನ್ನಡ ಧ್ವಜವನ್ನು ಹಾರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದರು.

DCM D K Shivakumar

ಬೆಂಗಳೂರಿನ 50 ಪ್ರತಿಶತದಷ್ಟು ಜನಸಂಖ್ಯೆಯು ಹೊರರಾಜ್ಯದಿಂದ ಬಂದವರಿಂದ ಕೂಡಿದೆ ಹಾಗಾಗಿ ನಾವು ನಮ್ಮ ಸ್ಥಳೀಯ ಆಚರಣೆಗಳನ್ನು, ಸಂಸ್ಕೃತಿಯನ್ನು ಹೆಮ್ಮೆಯಿಂದ ಬೆಳೆಸುವುದು, ಆಚರಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಹಾಗೆಯೇ ಕನ್ನಡ ಭಾಷೆಗೆ ಗೌರವವನ್ನು ಕೊಡಬೇಕು ಹಾಗೂ ಭಾಷೆಯನ್ನು ಬಳಸಲು ಉತ್ತೇಜಿಸಬೇಕೆಂದು ಸೂಚಿಸಿದರು.

ಕನ್ನಡ ಪರ ಸಂಘಟನೆಗಳು ಯಾವುದೇ ರೀತಿಯ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳದಂತೆ ಎಚ್ಚರಿಸಿದರು. ಹಾಗೆಯೇ ಕಡ್ಡಾಯವಾಗಿ ಧ್ವಜಾರೋಹಣ ಮಾಡಲು ಆಜ್ಞಾಪಿಸಿದರು.