Delhi crackers ban

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ದಹಲಿಯಲ್ಲಿ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಮುಂಬರುವ ದೀಪಾವಳಿಗೆ ಹಸಿರು ಪಟಾಕಿ ಸೇರಿ ಯಾವುದೇ ರೀತಿಯ ಪಟಾಕಿಯನ್ನು ಬಳಸಬಾರದೆಂದು ನಿಷೇದಾಜ್ಞೆ ಹೊರಡಿಸಿದ್ದಾರೆ.


Home » ಟ್ರೆಂಡಿಂಗ್ ನ್ಯೂಸ್ » (Delhi Govt.) ದೆಹಲಿ: ಜ. 1 ರವರೆಗೆ ಎಲ್ಲಾ ರೀತಿಯ ಪಟಾಕಿ ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧ!

ದೆಹಲಿ ಸರ್ಕಾರ ಎಲ್ಲಾ ರೀತಿಯ ಪಟಾಕಿಯನ್ನು ಸಂಪೂರ್ಣವಾಗಿ ತಯಾರಿಸುವುದು, ಶೇಖರಿಸುವುದು, ಮಾರಾಟ ಮಾಡುವುದು ಹಾಗೂ ಬಳಸುವುದನ್ನು ಜನವರಿ 1 ರ ವರೆಗೆ ನಿಷೇಧಿಸಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು – Delhi Pollution Control Committee (DPCC), 1981 ರ Air (Prevention and Control of Pollution) ಕಾಯಿದೆ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸಿದೆ ಮತ್ತು ಆನ್‌ಲೈನ್ ಮಾರಾಟ ಮತ್ತು ವಿತರಣೆಯ ಮೇಲಿನ ನಿರ್ಬಂಧಗಳನ್ನು ಸಹ ಒಳಗೊಂಡಿದೆ.

ಪಟಾಕಿ ನಿಷೇಧವನ್ನು ಸಾರ್ವಜನಿಕ ಹಿತ ದೃಷ್ಠಿಯಿಂದ ನಿರ್ಧರಿಸಿ ಕೈಗೊಳ್ಳಲಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಮಾಲಿನ್ಯದ ಮಟ್ಟವು ಏರುವುದರಿಂದ ಇದೇ ತಿಂಗಳು ಬರುವ ದೀಪಾವಳಿಯನ್ನು ಸೇರಿ ಮುಂಬರುವ ಯಾವುದೇ ಹಬ್ಬಗಳ್ಳಲ್ಲಿಯೂ ಪಟಾಕಿಯನ್ನು ಬಳಸುವಂತಿಲ್ಲವೆಂದು ಹೇಳಿದರು.

ಈ ನಿಷೇಧವು ಆನ್‌ಲೈನ್ ಮೂಲಕ ತರಿಸುವ ಪಟಾಕಿಗಳನ್ನು ಒಳಗೊಂಡಿದೆ. ಈ ನಿರ್ಧಾರಕ್ಕೆ ದೆಹಲಿಯ ಜನ ಸಹಕರಿಸಬೇಕೆಂದು ದೆಹಲಿ ಸರ್ಕಾರ ಕೇಳಿಕೊಂಡಿದೆ.

ಸಪ್ಟೆಂಬರ್ ೯ ರಂದು ದೆಹಲಿ ಸರ್ಕಾರವು ಪಟಾಕಿ ನಿಷೇಧಿಸುವುದಾಗಿ ಮೊದಲೇ ಘೋಷಿಸಿತ್ತು. ಇದಾದ 1 ತಿಂಗಳ ನಂತರ ನಿಷೇಧವನ್ನು ಜಾರಿಗೆ ತಂದಿದೆ.


ಇನ್ನಷ್ಟು ಸುದ್ದಿಗಳು