Bengaluru Rain

ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಮಳೆಯಾರ್ಭಟ ಹೆಚ್ಚಾಗಿದೆ.


Home » ಟ್ರೆಂಡಿಂಗ್ ನ್ಯೂಸ್ » Bengaluru Rain: ಮುಂದುವರೆದ ಮಳೆಯ ಆರ್ಭಟ! Phoenix Mall Of Asia, Manyata Tech Park ಹಾಗೂ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಗಳು ಜಲಾವೃತ!

ಬೆಂಗಳೂರಿನಲ್ಲಿ ಮಂಗಳವಾರ ಕಳೆದ 24 ಘಂಟೆಗಳಲ್ಲಿ 37 ಮಿಮೀ ಮಳೆಯಾಗಿದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ 65 ಮಿಮೀ ಮಳೆಯಾಗಿದೆ ಎಂದು Weather India ವರದಿ ಮಾಡಿದೆ.

ಭಾರತದ ಅತೀ ದೊಡ್ಡ ಟೆಕ್ ಪಾರ್ಕ್ ಗಳಲ್ಲಿ ಒಂದಾದ ಮಾನ್ಯತಾ ಟೆಕ್ ಪಾರ್ಕ್ ಭಾರಿ ಮಳೆಯಿಂದ ಕೆರೆಯಂತಾಗಿದೆ. ಮಾನ್ಯತಾ ಟೆಕ್ ಪಾರ್ಕಿನ ಮುಂಭಾಗದಲ್ಲಿ ನಿರ್ಮಾಣದ ಹಂತದಲ್ಲಿದ್ದ ಬಹುಮಹಡಿ ಕಟ್ಟಡದಿಂದ ನೀರು ಜಲಪಾತದ ಹಾಗೆಯೇ ಸುರಿಯುತ್ತಿದ್ದ ವಿಡಿಯೋವೊಂದನ್ನು ‘ಮಾನ್ಯತಾ ಟೆಕ್ ಫಾಲ್ಸ್’ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರೊಂದಿಗೆ ಮಳೆ ನೀರು ಹೆಚ್ಚಾಗಿ ಮಣ್ಣಿನೊಂದಿಗೆ ಕಟ್ಟಡದಲ್ಲಿದ್ದ ಸಾಮಾಗ್ರಿಗಳು ಮಳೆನೀರಿನೊಂದಿಗೆ ಕೊಚ್ಚಿ ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

ಇನ್ನು ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗಳು ಜಲಾವೃತವಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 3 ಅಡಿಯ ವರೆಗೆ ನೀರು ನಿಂತು ಮನೆಯಲ್ಲಿದ್ದ ಸಾಮಾಗ್ರಿಗಳೆಲ್ಲಾ ನೀರುಪಾಲಾಗಿವೆ. BBMP (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮುಖ್ಯ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆಯ ಕಾರಣ ಬುಧವಾರ IT ಕೆಲಸಗಾರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿತ್ತು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ಕರಾವಳಿ ತೀರ, ಕೇರಳ, ಗೋವಾ ಹಾಗೂ ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಮತ್ತು ತಮಿಳುನಾಡಿನಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆಯೆಂದು ಆರೇಂಜ್ ಅಲರ್ಟ್ ಘೋಷಿಸಿದೆ.

ಇನ್ನಷ್ಟು ಸುದ್ದಿಗಳು