india vs new zealand test

Home » ಕ್ರೀಡಾ ಸುದ್ದಿ » IND vs NZ Test Match: 5 ಡಕ್ ಔಟ್! 46 ಗೆ All Out! ಅತೀ ಕಡಿಮೆ ರನ್ ಬಾರಿಸಿ ಕೆಟ್ಟ ದಾಖಲೆ ಬರೆದ ಭಾರತ.

IND vs NZ Test Match: ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಮ್ಯಾಚ್‌ನ 2 ನೇ ದಿನದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ರೋಹಿತ್ ಶರ್ಮಾ ಟೀಂ 31.2 ಓವರ್‌ಗಳಲ್ಲಿ ಕೇವಲ 46 ರನ್ ಗಳಿಸಿ ನೀರಸ ಪ್ರದರ್ಶನ ನೀಡಿತು. ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪಿಚ್ ಗ್ರಹಿಸುವಲ್ಲಿ ಎಡವಿರುವುದಾಗಿ ಹಾಗೂ ಟಾಸ್ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿರುವುದಾಗಿ ತಪ್ಪೊಪ್ಪಿಕೊಂಡರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 2 ನೇ ದಿನದಾಟದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ವೈಫಲ್ಯ ಕಂಡಿತು. ಇದರಿಂದ ನ್ಯೂಜಿಲೆಂಡ್ 3 ವಿಕೆಟ್ ಕಳೆದುಕೊಂಡು 180 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ.

ಭಾರತ ತಂಡದ ಆಟಗಾರರಾದ ಯಶಸ್ವಿ ಜೈಸ್ವಾಲ್ (13 ರನ್), ರೋಹಿತ್ ಶರ್ಮಾ (2 ರನ್), ರಿಷಭ್ ಪಂತ್ (20 ರನ್), ಕುಲ್‌ದೀಪ್ ಯಾದವ್ (2 ರನ್), ಬುಮ್ರಾ (1 ರನ್), ಮೊಹಮ್ಮದ್ ಸಿರಾಜ್ (4 ರನ್) ಗಳಿಸಿ 31.2 ಓವರ್‌ಗಳಲ್ಲಿ 46 ರನ್ ಕಲೆಹಾಕಿದರೆ, ವಿರಾಟ್ ಕೋಹ್ಲಿ, ಸರ್ಫಾಜ್ ಖಾನ್, ಕೆ ಎಲ್ ರಾಹುಲ್, ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಡಕ್ ಔಟ್ ಆಗುವ  ಮೂಲಕ ತವರಿನಲ್ಲಿ ಎರಡನೇ ಅತಿ ಕಡಿಮೆ ರನ್ ಗಳಿಸಿದ ದಾಖಲೆ ಮಾಡಿತು.

ನ್ಯೂಜಿಲೆಂಡ್ ತಂಡದ ಆಟಗಾರರಾದ ಟಾಮ್ ಲಾಥಮ್ (15 ರನ್) ಗಳಿಸಿ ಹಾಗೂ ವಿಲ್ಲ್ ಯಂಗ್ (33 ರನ್) ಗಳಿಸಿ ಕುಲ್‌ದೀಪ್ ಯಾದವ್ ಅವರ ಬೌಲಿಂಗ್‌ಗೆ ಔಟಾದರು , ಡೆವಾನ್ ಕಾನ್ವೆ (13 ರನ್) ಗಳಿಸಿ ಅಶ್ವಿನ್ ಅವರ ಬೌಲಿಂಗ್‌ಗೆ ಔಟಾದರು. ಇನ್ನುಳಿದಂತೆ ರಚಿನ್ ರವೀಂದ್ರ 34 ಬಾಲ್‌ಗೆ 22 ರನ್ ಬಾರಿಸಿ, ಡರಿಲ್ ಮಿಚೆಲ್ 39 ಬಾಲ್‌ಗೆ 14 ರನ್ ಬಾರಿಸಿ ಮೂರನೇ ದಿನದ ಪಂದ್ಯದ ಮೇಲೆ ದೃಷ್ಠಿ ನೆಟ್ಟಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪಿಚ್ ಗ್ರಹಿಸುವಲ್ಲಿ ಎಡವಿರುವುದಾಗಿ ಹಾಗೂ ಟಾಸ್ ವಿಚಾರದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿರುವುದಾಗಿ ತಪ್ಪೊಪ್ಪಿಕೊಂಡರು.

ಇನ್ನಷ್ಟು ಸುದ್ದಿಗಳು