Salman Khan death threat

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತಾವೇ ಕೊಲೆ ಮಾಡಿರುವುದಾಗಿ ಹೇಳಿಕೊಂಡಿರುವ ಮಹಾರಾಷ್ಟ್ರದ ಸಚಿವರಾಗಿದ್ದ ಬಾಬಾ ಸಿದ್ದಿಕಿ ಅವರ ಭಯಾನಕ ಹತ್ಯೆಯ ನಂತರ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಬರುತ್ತಿರುವುದು ಹೆಚ್ಚಾಗಿದೆ.

‘ಇದನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಜೀವಂತವಾಗಿರಬೇಕೆಂದರೆ 5 ಕೋಟಿ ಹಣ ಕೊಟ್ಟು ಲಾರೆನ್ಸ್ ಬಿಷ್ಣೋಯ್ ಜೊತೆ ಶತೃತ್ವವನ್ನು ಕೊನೆಗೊಳಿಸಿ. ಇಲ್ಲವಾದಲ್ಲಿ ಬಾಬಾ ಸಿದ್ದಕಿ ಅವರ ಸಾವಿಗಿಂತಲೂ ಹೀನಾಯ ಸಾವನ್ನು ಕಾಣಬೇಕಾಗುತ್ತದೆ’ ಎಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನಿಂದ ಬಂದಿರಬಹುದು ಎನ್ನಲಾಗುತ್ತಿರುವ ವಾಟ್ಸಾಪ್ ಸಂದೇಶವೊಂದನ್ನು ಮುಂಬೈ ಟ್ರಾಫಿಕ್ ಪೋಲೀಸರಿಗೆ ಕಳುಹಿಸಲಾಗಿದೆ.

ಮೂಲಗಳ ಪ್ರಕಾರ ಮುಂಬೈ ಪೋಲೀಸರು ವಾಟ್ಸಾಪ್ ಮೆಸೇಜ್ ಯಾರಿಂದ ಬಂದಿರಬಹುದು ಎಂಬುವುದಾಗಿ ಕುರಿತು ಪತ್ತೆಹಚ್ಚಲು ತನಿಖೆ ನಡೆಸುತ್ತಿದೆ. ಹಾಗೆಯೇ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಹೆಚ್ಚಿಸಿರುವುದಾಗಿ ತಿಳಿದುಬಂದಿದೆ.

Lawrence Bishnoi

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಬರುತ್ತಿವುದು ಇದೇ ಮೊದಲೇನಲ್ಲ. 2022 ರಲ್ಲಿ ತಮ್ಮ ನಿವಾಸದ ಬಳಿಯೇ ಪ್ರಾಣ ಬೆದರಿಕೆಯಿದ್ದ ಪತ್ರವೊಂದು ಸಿಕ್ಕಿತ್ತು. 2023 ಮಾರ್ಚ್ ನಲ್ಲಿ ಬಿಷ್ಣೋಯ್ ಗ್ಯಾಂಗ್ ಸದ್ಯಸರಿಂದ ಬಂದ್ದದ್ದು ಎಂದು ಆರೋಪಿಸಲಾದ ಇಮೇಲ್ ಒಂದನ್ನು ಖಾನ್ ಸ್ವೀಕರಿಸಿದ್ದರು. 2024 ರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತನ್ನು ಬಳಸಿ ಖಾನ್ ಅವರ ಫಾರ್ಮ್ ಹೌಸ್ ಗೆ ನುಸುಳಲು ಪ್ರಯತ್ನಿಸಿದ್ದರು.

ಬಿಷ್ಣೋಯಿಗೆ ಏಕೆ ಸಲ್ಮಾನ್ ಖಾನ್ ಮೇಲೆ ದ್ವೇಷ?


ಕೃಷ್ಣ ಮೃಗವನ್ನು ಬಿಷ್ಣೋಯ್ ಸಮುದಾಯದವರು ಪವಿತ್ರವೆಂದು ಪೂಜಿಸುತ್ತಾರೆ ಎನ್ನಲಾಗಿದೆ. 1998 ರಲ್ಲಿ ರಾಜಸ್ಥಾನ್‌ನ ಜೋಧ್‌ಪುರ್‌ನಲ್ಲಿ ‘ಹಮ್ ಸಾಥ್ ಸಾಥ್ ಹೇ’ ಸಿನೆಮಾ ಚಿತ್ರೀಕರಣದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಎರಡು ಅಳಿವಿನಂಚಿನಲ್ಲಿದ್ದ ಕೃಷ್ಣ ಮೃಗಗಳನ್ನು ಬೇಟೆಯಾಡಿ ಕೊಂದಿದ್ದರು. ಇದರ ಕುರಿತಂತೆ 1979 ರ ಭಾರತೀಯ ವನ್ಯಜೀವಿ ಕಾಯ್ದೆಯಡಿ ಸೆಕ್ಷನ್ 9/51 ವಿಧಿಸಲಾಗಿದೆ.

ಇದರ ಸಲುವಾಗಿ 2018 ರಲ್ಲಿ ಕೋರ್ಟಿಗೆ ಖಾನ್ ಹಾಜರಾಗಿದ್ದ ಸಂದರ್ಭದಲ್ಲಿ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್‌ರನ್ನು ಜೋಧ್‌ಪುರ್‌ನಲ್ಲಿಯೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಹಾಗೂ ಸಲ್ಮಾನ್ ಖಾನ್ ಅವರ ಈ ಕೃತ್ಯದಿಂದ ನಮ್ಮ ಸಮುದಾಯಕ್ಕೆ ಅವಮಾನವಾಗಿದೆ ಎಂದು ಹೇಳಿದ್ದರು.


ಇನ್ನಷ್ಟು ಸುದ್ದಿಗಳು