PKL 2024 Season 11

Pro Kabaddi 2024: ಪ್ರೊ ಕಬಡ್ಡಿ ಲೀಗ್ ಇಂದಿನಿಂದ ಶುರುವಾಗಲಿದೆ. ಹೈದರಾಬಾದ್ ನ ಗಚ್ಚಿಬೌಲಿಯಲ್ಲಿರುವ GMCB ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಬುಲ್ಸ್ ಮತ್ತು ತೆಲಗು ಟೈಟಾನ್ಸ್ ತಂಡ ಉದ್ಘಾಟನಾ ಪಂದ್ಯವನ್ನಾಡಲು ತಯಾರಾಗಿದೆ.


ಈ ವರ್ಷದ ಆವೃತ್ತಿಯಲ್ಲಿ ಮೊದಲ ಹಂತದ ಪಂದ್ಯಗಳು ಅ. ೧೮ ರಿಂದ ನ. ೯ರವರೆಗೆ ಹೈದರಾಬಾದ್‌ನ ಜಿಎಮ್‌ಸಿಬಿ ಕ್ರೀಡಾಂಗಣದಲ್ಲಿ ನಡೆದರೆ, ಎರಡನೇ ಹಂತದ ಪಂದ್ಯಗಳು ನ. ೧೦ ರಿಂದ ಡಿ. ೧ ರವರೆಗೆ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ, ಮತ್ತು ಮೂರನೇ ಹಂತದ ಪಂದ್ಯಗಳು ಡಿ. ೩ರಿಂದ ಡಿ. ೨೪ ರವರೆಗೆ ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ಲೇ ಆಫ್ ಪಂದ್ಯಗಳ ವೇಳಾಪಟ್ಟಿ ಇನ್ನು ಬಿಡುಗಡೆಯಾಗಿಲ್ಲ.

PKL 2024

ಇಂದು ರಾತ್ರಿ ೮ ರಿಂದ ಆರಂಭವಾಗುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ತೆಲಗು ಟೈಟಾನ್ಸ್ ತಂಡವನ್ನು ಎದುರಿಸುತ್ತಿದೆ. ಒಂದು ಕಡೆ ಪ್ರದೀಪ್ ನರ್ವಾಲ್ ಸಾರಥ್ಯದಲ್ಲಿ ಬೆಂಗಳೂರು ಬುಲ್ಸ್ ಪುಟಿದೇಳಲು ಸಜ್ಜಾಗಿದ್ದರೆ ಇನ್ನೊಂದೆಡೆ ಬುಲ್ಸ್ ತಂಡದಲ್ಲೇ ಆಡಿದ್ದ ಪವನ್ ಸೆಹ್ರಾವತ್ ಈ ವರುಷ ತೆಲಗು ಟೈಟಾನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಹಾಗೆಯೇ ರಾತ್ರಿ ೯ ರಿಂದ ದಬಾಂಗ್ ಡೆಲ್ಲಿ, ಯು ಮುಂಬಾ ವಿರುದ್ಧ ಸೆಣಸಾಡಲಿದೆ. ನವೀನ್ ಕುಮಾರ್ ದಬಾಂಗ್ ಡೆಲ್ಲಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ ಮತ್ತು ಯು ಮುಂಬಾ ತಂಡವನ್ನು ೯ ನೇ ಆವೃತ್ತಿಯಲ್ಲಿ ಗೆಲ್ಲಿಸಿದ್ದ ಸುನಿಲ್ ಕುಮಾರ್ ಮುನ್ನಡೆಸುತ್ತಿದ್ದಾರೆ.


ಇನ್ನಷ್ಟು ಸುದ್ದಿಗಳು