sarfaraz khan

Sarfaraz khan: IND vs NWZ ನಡುವಿನ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸರ್ಫಾಜ್ ಖಾನ್ ಭಾರತ ತಂಡಕ್ಕೆ ಬೇಕಾಗಿದ್ದ ರನ್ ಬರ ನೀಗಿಸಿದರು.


ಬೆಂಗಳೂರಿನ ಎಮ್. ಚಿನ್ನಸ್ವಾಮಿ ಕೀಡಾಂಗಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯದ 4 ನೇ ದಿನದ ಪಂದ್ಯದಲ್ಲಿ ಅಜೇಯ 22 ಓವರ್‌ಗಳಲ್ಲಿ 113 ರನ್ ಬಾರಿಸಿ ಸರ್ಫಾಜ್ ಖಾನ್ ಹಾಗೂ ರಿಷಭ್ ಪಂತ್ ಕೇವಲ 12 ರನ್‌ಗಳ ಅಂತರ ಕಾಯ್ದುಕೊಳ್ಳುವ ಮೂಲಕ ಗೆಲುವಿನ ಭರವಸೆ ನೀಡಿದರು.

ಮೊದಲ ಟೆಸ್ಟ್ ಮ್ಯಾಚ್‌ನ 2 ನೇ ದಿನದ ಪಂದ್ಯದಲ್ಲಿ ಕೇವಲ 46 ರನ್ ಗಳಿಸಿ ಆಲ್ ಔಟ್ ಆಗಿದ್ದ ಭಾರತದ ಮೇಲೆ ಸೋಲಿನ ಛಾಯೆ ಮೂಡಿದಂತಾಗಿತ್ತು. ಆದರೆ ಸರ್ಫಾಜ್ ಖಾನ್ 15 (156) ಅವರ ಶತಕದಾಟ ಮತ್ತು ರಿಷಭ್ ಪಂತ್ 53 (56) ಅವರ ಅರ್ಧಶತಕದಾಟವು ತಂಡದ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

sarfaraz khan celebration

2 ನೇ ದಿನದ ಪಂದ್ಯದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡು ಮೊಣಕಾಲು ಊತದಿಂದ ಬಳಲಿದ್ದ ರಿಷಭ್ ಪಂತ್ 3 ನೇ ದಿನದ ಆಟದಲ್ಲಿ ಅಲಭ್ಯರಾಗಿ ವಿಶ್ರಾಂತಿ ಪಡೆದು 4 ನೇ ದಿನದ ಆಟದಲ್ಲಿ ಸರ್ಫಾಜ್ ಖಾನ್ ಅವರಿಗೆ ಸಮರ್ಥವಾಗಿ ಆಡಲು ಜೊತೆಯಾಗಿ ತಂಡದ ಮೊತ್ತವು 350 ರ ಸಮೀಪ ತಲುಪಿಸಲು ಆಸರೆಯಾದರು.

ಮಳೆಯ ಕಾರಣದಿಂದ ಪಂದ್ಯಕ್ಕೆ ವಿರಾಮ ನೀಡಿ, ನಿಗದಿತ ಸಮಯಕ್ಕೂ ಮುಂಚಿತವಾಗಿ ಮಧ್ಯಾಹ್ನದ ಊಟದ ವಿರಾಮ ತೆಗೆದುಕೊಂಡರು. ಸದ್ಯ ಮಳೆಯ ಕಾರಣದಿಂದ ಪಂದ್ಯವನ್ನು ನಿಲ್ಲಿಸಲಾಗಿದೆ.


ಇನ್ನಷ್ಟು ಸುದ್ದಿಗಳು: