bomb threat flights

ಏರ್ ಇಂಡಿಯಾ, ಇಂಡಿಗೊ, ವಿಸ್ತಾರ, ಸ್ಟಾರ್ ಏರ್, ಆಕಾಶ ಏರ್, ಸ್ಪೈಸ್‌ ಜೆಟ್ ಮತ್ತು ಅಲಯನ್ಸ್ ಏರ್ ವಿಮಾನ ಸೇರಿದಂತೆ ಹಲವು ಭಾರತೀಯ ವಿಮಾನ ಸಂಸ್ಥೆಗಳಿಗೆ ಶುಕ್ರವಾರದಿಂದ ಇವತ್ತಿನವರೆಗೆ 3೦ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.


ಭಾರತೀಯ ವಿಮಾನ ಸಂಸ್ಥೆಗಳು ನಿರ್ವಹಿಸುವ ಒಟ್ಟು 70 ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿರುವುದಾಗಿ ತಿಳಿದುಬಂದಿದೆ ಹಾಗೂ ಅವುಗಳೆಲ್ಲವೂ ಸುಳ್ಳು ಬೆದರಿಕೆಗಳೆಂದು ಧೃಡಪಡಿಸಲಾಗಿದೆ.

ಇವುಗಳಲ್ಲಿ ಹೆಚ್ಚಿನದ್ದಾಗಿ ದೆಹಲಿ ಮತ್ತು ಮುಂಬೈನಿಂದ ಇಸ್ತಾನ್‌ಬುಲ್‌ಗೆ ಮತ್ತು ಜೋಧ್‌ಪುರ್‌ನಿಂದ ದೆಹಲಿಗೆ ಹೋಗುವ ಸೇವೆಗಳನ್ನು ನೀಡುವ ಇಂಡಿಗೊ ಏರ್‌ಲೈನ್ಸ್ ಹಾಗೂ ಉದಯ್‌ಪುರ್‌ನಿಂದ ಮುಂಬೈಗೆ ಹೋಗುವ ವಿಸ್ತಾರ ಏರ್‌ಲೈನ್ಸ್ ಗೆ ಸೇರುವ ವಿಮಾನಗಳನ್ನು ಗುರಿಮಾಡಿ ಬೆದರಿಕೆಗಳು ಬರುತ್ತಿರುವುದಾಗಿ ತಿಳಿದುಬಂದಿದೆ.

ಇಂಡಿಗೊ, ವಿಸ್ತಾರ ಮತ್ತು ಆಕಾಶ ವಿಮಾನಯಾನ ಸಂಸ್ಥೆಗಳು – ವಿಮಾನ ಭೂ ಸ್ಪರ್ಶವಾಗುವ ಮೊದಲು ಭದ್ರತಾ ಎಚ್ಚರಿಕೆಗಳನ್ನು ಸ್ವೀಕರಿಸುತ್ತಿರುವುದಾಗಿ ಹೇಳಿಕೊಂಡಿವೆ ಹಾಗೂ ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಭಧ್ರತಾ ಅಧಿಕಾರಿಗಳ ಸಹಾಯದಿಂದ ಪ್ರಯಾಣಿಕರ ಯೋಗಕ್ಷೇಮವನ್ನು ನೋಡಿಕೊಳ್ಳಲು ಕ್ರಮ ಕೈಗೊಂಡಿರುವುದಾಗಿ ಹೇಳಿಕೊಂಡಿವೆ.

ಶುಕ್ರವಾರ ವಿಸ್ತಾರ ಏರ್‌ಲೈನ್ಸ್ ಗೆ ಸೇರಿದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಸಂದರ್ಭದಲ್ಲಿ ಮುನ್ನೆಚರಿಕೆ ಕ್ರಮವಾಗಿ ವಿಮಾನವನ್ನು ತಲುಪಬೇಕಾಗಿದ್ದ ಸ್ಥಳವನ್ನು ಬದಲಿಸಿ ಫ್ರಾಂಕ್‌ಫರ್ಟ್ ಇಳಿಸಲಾಗಿತ್ತು.

Indian Airlines | Bomb threat India

ಕಳೆದ ಒಂದು ವಾರದಿಂದ ಇಲ್ಲಿಯವರೆಗೆ ಒಟ್ಟು 40 ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ಸ್ವೀಕರಿಸಿರುವುದಾಗು PTI (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ) ವರದಿ ಮಾಡಿದೆ. ಇವೆಲ್ಲವು ಹುಸಿ ಬಾಂಬ್ ಬೆದರಿಕೆಗಳೆಂದು ಸಾಬೀತಾಗಿದೆ.

ಈ ಘಟನೆಗಳಿಂದ ಭಾರತೀಯ ವಿಮಾನ ಸಂಸ್ಥೆಗಳಿಗೆ ಸೇರಿದ ವಿವಿಧ ವಿಮಾನ ಸಂಸ್ಥೆಗಳು 80 ಕೋಟಿಯವರೆಗೆ ನಷ್ಟವಾಗಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಹಾಗೂ ಈ ವಂಚನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಹಿಂದಿನ ಸುದ್ದಿ Sarfaraz khan: ಅಂತಾರಾಷ್ಟ್ರೀಯ ಟೆಸ್ಟ್ ಸರಣಿಯಲ್ಲಿ ಮೊದಲ ಶತಕ ಬಾರಿಸಿ ಗೆಲುವಿನ ನಿರೀಕ್ಷೆ ಮೂಡಿಸಿದ ಸರ್ಫಾಜ್ ಖಾನ್.

ಇನ್ನಷ್ಟು ಸುದ್ದಿಗಳು: