Digi kavach event

ಗೂಗಲ್ ಸಂಸ್ಥೆಯು ಭಾರತದಲ್ಲಿ ಆನ್ ಲೈನ್ ಮೂಲಕ ಹಣ ವಂಚನೆಯನ್ನು ನಿವಾರಿಸಲು ‘ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮ’ ಮೂಲಕ ‘Digi Kavach’ ಸೇವೆಯನ್ನು ಪರಿಚಯಿಸುತ್ತಿದೆ.

 

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಗೂಗಲ್ ಸಂಸ್ಥೆಯು ‘ಡಿಜಿ ಕವಚ್’ ಸೇವೆಯನ್ನು ‘ಗೂಗಲ್ ಫಿನ್‌ಟೆಕ್ ಅಸೋಸಿಯೇಷನ್ ಫಾರ್ ಕನ್ಸ್ಯೂಮರ್ ಎಂಪವರ್‌ಮೆಂಟ್’ (Fintech Accosiation For Consumer Empowerment – FACE) ನೊಂದಿಗೆ ಪ್ರಾರಂಭಿಸಿದೆ.

 

ಕೆಲಸ ಕೊಡಿಸುವ ಸೋಗಿನಲ್ಲಿ ನಿಮ್ಮಿಂದ ಹಣವನ್ನು ಪಡೆದು ವಂಚಿಸುವವರನ್ನು, ವಿವಿಧ ನಕಲಿ ಹೂಡಿಕೆ ಯೋಜನೆಗಳಲ್ಲಿ ಹಣ ಹಾಕುವಂತೆ ಹಾಗೂ ಹೆಚ್ಚು ಲಾಭ ಗಳಿಸುವ ಆಸೆ ತೋರಿಸಿ ಹಣ ದೋಚುವವರನ್ನು, ನಿಮ್ಮ ನಂಬರ್ ಲಕ್ಕಿ ಡಿಪ್ ನಲ್ಲಿ ಆಯ್ಕೆಯಾಗಿದೆ ಎಂದು ಮೋಸ ಮಾಡುವವರ ವಿರುದ್ಧ, ಅಪರಿಚಿತ ನಂಬರ್ ನಿಂದ ಬಂದ ಸಂದೇಶಗಳ್ಳಲ್ಲಿನ ಲಿಂಕ್ ಕ್ಲಿಕ್ ಮಾಡಿ ಆರ್ಥಿಕ ವಂಚನೆಗೆ ಒಳಗಾಗುತ್ತಿರುವ, ಹಣಕ್ಕಾಗಿ ಬೆದರಿಕೆ ಇಡುವವವರನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಮುಂಚಿತವಾಗಿ ‘ಡಿಜಿ ಕವಚ್’ ಎಚ್ಚರಿಕೆಯನ್ನು ನೀಡುತ್ತದೆ.

Digi kavach program - Google India

ಈ ಎಲ್ಲಾ ಸೇವೆಗಳನ್ನು ‘Google India’ ತನ್ನ ಸಾಮಾಜಿಕ ಜಾಲತಾಣವಾದ ‘X’ ನಲ್ಲಿ ‘ಡಿಜಿ ಕವಚ್’ ಸೇವೆಯನ್ನು ಬಳಸಿ ಜಾಗರೂಕರಾಗಿರಿ ಎಂಬ ಸಂದೇಶದೊಂದಿಗೆ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದೆ ಹಾಗೂ ಈ ವಿಡಿಯೋಗಳಿಗೆ ಗಾಯಕರಾದ ‘ನೀತಿ ಮೋಹನ್’ ಹಾಗೂ ‘ಅಂಕುರ್ ತಿವಾರಿ’ ಧ್ವನಿಯಾಗಿದ್ದಾರೆ.

 

ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ 👉 Digi Kavach Video