Baba Siddique: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (66) ರನ್ನು ನೆನ್ನೆ ರಾತ್ರಿ ಮುಂಬೈನ ಬಾಂದ್ರಾ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ. ತಕ್ಷಣ ಹತ್ತಿರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.
ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮಗ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕೊಲ್ಲಲಾಗಿದೆ. ರಾತ್ರಿ 9.30 ರ ಸುಮಾರಿಗೆ ಅನೇಕ ಸುತ್ತು ಗುಂಡು ಹಾರಿಸಿ ಮಾರಣಾಂತಿಕವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಗೆ ಸಂಬಂಧಿಸಿದಂತೆ ಮೂವರಲ್ಲಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ ಮೂರನೇ ವ್ಯಕ್ತಿ ಪರಾರಿಯಾಗಿದ್ದಾನೆ. ಹರಿಯಾಣದ ಗುರ್ಮೈಲ್ ಸಿಂಗ್ (23), ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ (19) ಮತ್ತು ಪರಾರಿಯಾದ ಮೂರನೇ ವ್ಯಕ್ತಿ ಉತ್ತರ ಪ್ರದೇಶದ ಶಿವಕುಮಾರ್ ಗೌತಮ್ ಎಂದು ಗುರುತಿಸಲಾಗಿದೆ.
ಈ ದಾಳಿಯಾದ ಕೆಲವೇ ಘಂಟೆಗಳಲ್ಲಿ ಶುಬು ಲೋಂಕರ್ ಎಂಬ ವ್ಯಕ್ತಿಗೆ ಸೇರಿದ ಫೇಸ್ಬುಕ್ ಖಾತೆಯಲ್ಲಿ “ಓಂ ಜೈ ಶ್ರೀ ರಾಮ್ ಜೈ ಭಾರತ್ ನಾನು ಜೀವನದ ಮೂಲವನ್ನು ಪರಿಗಣಿಸುತ್ತೇನೆ, ನಾನು ದೇಹ ಮತ್ತು ಸಂಪತ್ತನ್ನು ಧೂಳಿನಂತೆ ಪರಿಗಣಿಸುತ್ತೇನೆ. ಅದು ನಾನು ಮಾಡಿದ ಸತ್ಕಾರ್ಯ, ನಾನು ಅನುಸರಿಸಿದ ಸ್ನೇಹದ ಕರ್ತವ್ಯ. ಸಲ್ಮಾನ್ ಖಾನ್, ನಾವು ಈ ಯುದ್ಧವನ್ನು ಬಯಸಲಿಲ್ಲ ಆದರೆ ನೀವು ನಮ್ಮ ಸಹೋದರನಿಗೆ ಹಾನಿ ಮಾಡಿದ್ದೀರಿ. ಇಂದು ಬಾಬಾ ಸಿದ್ದಿಕ್ನ ಮರ್ಯಾದೆ ಮುಚ್ಚಿಹೋಗಿದೆ ಅಥವಾ ದಾವೂದ್ನೊಂದಿಗೆ ಒಂದು ಕಾಲದಲ್ಲಿ MCOCA (Maharashtra Control of Organised Crime Act) ಕಾಯಿದೆಯಡಿಯಲ್ಲಿದ್ದನು…. ಅವನ ಸಾವಿಗೆ ಕಾರಣ ಅನುಜ್ ಥಾಪನ್ ಮತ್ತು ದಾವೂದ್ನನ್ನು ಬಾಲಿವುಡ್, ರಾಜಕೀಯ, ಆಸ್ತಿ ವ್ಯವಹಾರದೊಂದಿಗೆ ಸಂಪರ್ಕಿಸುವುದು…ನಮಗೆ ಯಾರೊಂದಿಗೂ ದ್ವೇಷವಿಲ್ಲ, ಆದರೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್ಗೆ ಸಹಾಯ ಮಾಡುವವರು, ಅವರ ಖಾತೆಗಳ ಮೇಲೆ ನಿಗಾ ಇರಿಸಿ…. ಯಾರಾದರೂ ನಮ್ಮ ಸಹೋದರರನ್ನು ಕೊಲ್ಲಲು ಬಯಸಿದರೆ, ನಾವು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತೇವೆ…” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹಾಗೂ ಅನ್ಮೋಲ್ ಬಿಷ್ಣೋಯಿ ಎಂದು ಹ್ಯಾಶ್ಟ್ಯಾಗ್ ಹಾಕಲಾಗಿದೆ. ಇದರ ಕುರಿತು ತನಿಖೆ ನಡೆಯುತ್ತಿದೆ.
ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದ ಅಕೋಲಾದಲ್ಲಿ ಅಕ್ರಮ ಶಸ್ತಾಸ್ತ್ರಗಳನ್ನು ಹೊಂದಿದಕ್ಕಾಗಿ ಶುಬು ಲೋಂಕರ್ ನನ್ನು ಬಂಧಿಸಲಾಗಿತ್ತು ಹಾಗೂ ವಿಚಾರಣೆ ಸಂದರ್ಭದಲ್ಲಿ ಲಾರೆನ್ಸ್ ಬಿಷ್ಣೋಯಿಯ ಆಪ್ತ ಸಹೋದರ ಅನ್ಮೋಲ್ ಬಿಷ್ಣೋಯಿಯೊಂದಿಗೆ ವಿಡಿಯೋ ಕರೆಗಳ ಮೂಲಕ ಸಂಹವನ ನಡೆಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದರು ಎನ್ನಲಾಗಿದೆ.
ಸದ್ಯ 2022 ರಲ್ಲಿ ನಡೆದ ಸಿಧು ಮೂಸೆ ವಾಲ ಅವರ ಹತ್ಯೆ ಸೇರಿ ಹಲವಾರು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿದೆ.
- IPL Auction 2025: ಐಪಿಎಲ್ ಹರಾಜು ಪ್ರಕ್ರಿಯೆಗೆ ಕ್ಷಣಗಣನೆ! ನಾಯಕನ ಹುಡುಕಾಟದಲ್ಲಿ ಆರ್ಸಿಬಿ!
- ನಾಳೆ ರಿಲೀಸ್ ಆಗಬೇಕಿದ್ದ ‘Nayanthara: Beyond the Fairy Tale’ ಡಾಕ್ಯುಮೆಂಟರಿಗೆ ನೈಟ್ಮೇರ್ ಆದ ನಟ ಧನುಷ್. ಧನುಷ್ಗೆ ಬಹಿರಂಗ ಪತ್ರ ಬರೆದ ನಟಿ ನಯನತಾರಾ. 10 ಕೋಟಿ ಬೇಡಿಕೆಯಿಟ್ಟ ನಟ ಧನುಷ್!
- ಭಾರತದ ISRO ಜೊತೆ ಕೈ ಜೋಡಿಸಿದ SpaceX. ಸ್ಪೇಸ್ ಎಕ್ಸ್ ನ Falcon 9 ರಾಕೆಟ್ನಲ್ಲಿ ಉಡಾವಣೆಯಾಗಲು ಸಜ್ಜಾಗಿದೆ ಭಾರತದ GSAT-20 ಉಪಗ್ರಹ!
- ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!
- ಡೆಹ್ರಾಡೂನ್ ಕಾರ್ ಆಕ್ಸಿಡೆಂಟ್: 6 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು. ಭೀಕರ ಅಪಘಾತದ ತೀವ್ರತೆಯನ್ನು ತೋರಿಸುತ್ತಿರುವ ಕಿತ್ತು ಹೋದ ಕಾರಿನ ಸನ್ರೂಫ್!