Bahraich Violence: ನೆನ್ನೆ ರಾತ್ರಿ ನಡೆದ ದುರ್ಗಾದೇವಿ ವಿಸರ್ಜನಾ ಮೆರವಣಿಗೆಯಲ್ಲಿ 2 ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಇದರಲ್ಲಿ ಓರ್ವ ಸಾವನಪ್ಪಿದ್ದು, ಘಟನೆ ಹಿಂಸಾಚಾರಕ್ಕೆ ತಿರುಗಿ ವಾಹನ, ಅಂಗಡಿ, ಮುಂಗಟ್ಟುಗಳು ಬೆಂಕಿಗಾಹುತಿಯಾಗಿವೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಕುರಿತು ಇಂದು ಸಭೆ ಕರೆದಿದ್ದಾರೆ.


Home » ಟ್ರೆಂಡಿಂಗ್ ನ್ಯೂಸ್ » ಬಹ್ರೈಚ್ ಕೋಮುಗಲಭೆ (Bahraich Violence): ದುರ್ಗಾದೇವಿ ವಿಗ್ರಹ ಮೆರವಣಿಗೆಯಲ್ಲಿ 2 ಗುಂಪುಗಳ ಘರ್ಷಣೆ. ಒಬ್ಬರ ಸಾವು, ಹಲವರಿಗೆ ಗಾಯ. ಭುಗಿಲೆದ್ದ ಹಿಂಸಾಚಾರ!

Bahraich Violence: ಉತ್ತರಪ್ರದೇಶದ ಬಹ್ರೈಚ್ ನ ‘ಮಹ್ಸಿ’ ಎಂಬಲ್ಲಿ ಭಾನುವಾರ ರಾತ್ರಿ ದುರ್ಗಾದೇವಿಯ ಮೆರವಣಿಗೆಯು ಮುಸ್ಲಿಂ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ಸಾಗುತ್ತಿರುವಾಗ ಡಿಜೆ ಸಂಗೀತವನ್ನು ನಿಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಘರ್ಷಣೆಯು ತಾರಕಕ್ಕೇರಿ ಕಲ್ಲು ತೂರಾಟ ನಡೆದಿದೆ.

ಅಲ್ಲಿಗೆ ಮುಗಿಯದ ಗಲಭೆಯು ಅಲ್ಲಿನ ಜನ ಗುಂಡು ಹಾರಿಸತೊಡಗಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗಲಭೆಯಲ್ಲಿ ಅಲ್ಲಿಯ ನಿವಾಸಿ (22) ವರ್ಷದ ರಾಮ್ ಗೋಪಾಲ್ ಮಿಶ್ರಾ ಅವರಿಗೆ ಗುಂಡೇಟು ತಗಲಿದೆ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಸಾವಿನಪ್ಪಿರುವ ವಿಷಯ ತಿಳಿದು ಕೋಪಗೊಂಡ ಜನರು ಆ ಪ್ರದೇಶದಲ್ಲಿದ್ದ ವಾಹನ, ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಘಟನೆಯ ನಂತರ ಮಹ್ಸಿ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೃತಪಟ್ಟ ಯುವಕನ ಅಂತಿಮ ವಿಧಿವಿಧಾನವನ್ನು ನೆರವೇರಿಸಲು ಆತನ ಸಂಬಂಧಿಕರು ನಿರಾಕರಿಸಿ, ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಲೀಸರಿಗೆ ಒತ್ತಾಯಿಸಿದ್ದಾರೆ.

Bahraich Clash

ಪ್ರಕರಣಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಿರುವ ಪೋಲೀಸರು 10 ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆದಿದ್ದಾರೆ.



ಇನ್ನಷ್ಟು ಸುದ್ದಿಗಳು