Bandra Terminus Stampede

Bandra stampede: ದೀಪಾವಳಿಯ ಪ್ರಯುಕ್ತ ಸಾಲು ರಜೆಗಳಿದ್ದ ಕಾರಣ 22921 ಬಾಂದ್ರಾ-ಗೋರಖ್‌ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ ತೆರಳಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಭಾನುವಾರ ಬೆಳಗ್ಗೆ ಮುಂಬೈನ ಬಾಂದ್ರಾ ಟರ್ಮಿನಸ್ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ 1 ರಲ್ಲಿ ಕಾಲ್ತುಳಿತ ಉಂಟಾಗಿ 9 ಮಂದಿ ಗಾಯಗೊಂಡಿದ್ದಾರೆ.

Home » ಟ್ರೆಂಡಿಂಗ್ ನ್ಯೂಸ್ » Bandra Stampede: ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಭಾರಿ ಜನದಟ್ಟಣೆಯಿಂದ ಕಾಲ್ತುಳಿತ. 9 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು.

ಬೆಳಗ್ಗೆ 5.15 ಕ್ಕೆ ಹೊರಡಬೇಕಿದ್ದ 22921 ಬಾಂದ್ರಾ-ಗೋರಖ್‌ಪುರ್ ಎಕ್ಸ್ ಪ್ರೆಸ್ ರೈಲು ಬೆಳಗಿನ ಜಾವ ಸುಮಾರು 2.44 ರ ಹೊತ್ತಿಗೆ ನ Bandra Terminus ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಗೆ ತೆರಳುತ್ತಿರುವಾಗ, ಟ್ರೈನ್ ನಿಲ್ಲಿಸುವ ಮೊದಲೇ ಹತ್ತಲು ಆರಂಭಿಸಿದ್ದರು.

ದೀಪಾವಳಿ ಹಬ್ಬವಿರುವ ಕಾರಣ ಸೀಟ್ ಸಿಗುವುದು ಕಷ್ಟವಾಗುತ್ತದೆ ಎಂದು ಮುಂಚಿತವಾಗಿ ಸೀಟ್ ಕಾಯ್ದಿರಿಸಕೊಳ್ಳಲು ಪ್ಲಾಟ್‌ಫಾರ್ಮ್ 1 ರಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಕಾರಣವಾಯಿತೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂದ್ರಾ-ಗೋರಖ್‌ಪುರ್ ಅಂತ್ಯೊದಯ ಎಕ್ಸ್ ಪ್ರೆಸ್ ರೈಲು ಒಟ್ಟು 22 ಪ್ಲಾಟ್‌ಫಾರ್ಮ್ ಗಳನ್ನು ಹೊಂದಿದೆ. ಎಲ್ಲಾ ಸೀಟ್‌ಗಳನ್ನು ಕಾಯ್ದರಿಸಲಾಗಿರಲಿಲ್ಲ ಹಾಗಾಗಿ ಜನ ಮುಂಚಿತವಾಗಿ ಸೀಟ್ ಹಿಡಿಯಲು ಪ್ಲಾಟ್‌ಫಾರ್ಮ್ ಬಳಿ ಧಾವಿಸಿದರು. ಒಟ್ಟು ಸುಮಾರು 1500 ಜನ ರೈಲ್ವೇ ನಿಲ್ದಾಣದಲ್ಲಿದ್ದರು. ಒಟ್ಟಿಗೆ ಜನರು ನೂಕುನುಗ್ಗಲು ಮಾಡಿದ್ದರಿಂದ ಪರಿಸ್ಥಿತಿ ಕೈ ಮೀರಿ ಕಾಲ್ತುಳಿತಕ್ಕೆ ಕಾರಣವಾಯಿತೆಂದು ಅಧಿಕಾರಿಗಳು ತಿಳಿಸಿದರು.

ಒಟ್ಟು 9 ಮಂದಿಗೆ ಗಾಯಗಳಾಗಿದ್ದು 7 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಇನ್ನಷ್ಟು ಸುದ್ದಿಗಳು: