Jio hotstar domain name

ಹೌದು! ದೆಹಲಿ ಮೂಲದ App Developer ಒಬ್ಬರು jiohotstar.com domain ಖರೀದಿಸಿ ರಿಲಯನ್ಸ್ ಗೆ ಮಾರಾಟ ಮಾಡಿ ಬಂದ ಹಣದಲ್ಲಿ ಕೇಂಬ್ರಿಡ್ಜ್ ನಲ್ಲಿ ಅಧ್ಯಯನ ಮಾಡುವುದಾಗಿ ಕೋರಿದ್ದಾರೆ.

2023 ರಲ್ಲಿ ಐಪಿಎಲ್ ಸ್ಟ್ರೀಮಿಂಗ್ ಪರವಾನಗಿ ಕಳೆದುಕೊಂಡ Disney Hostar, ಗಣನೀಯವಾಗಿ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವುದಾಗಿ ಮತ್ತು ತನ್ನ ಪ್ರತಿಸ್ಪರ್ಧಿಯೊಂದಿಗೆ ವಿಲೀನ ಮಾಡಿಕೊಳ್ಳಲು ಪರಿಗಣಿಸುತ್ತಿದೆ ಎಂಬ ವರದಿಯನ್ನು ನೋಡಿರುವುದಾಗಿ ಹೇಳಿದ್ದಾರೆ.

Saavn ಸಂಗೀತ ಸ್ಟ್ರೀಮಿಂಗ್ ಸೇವೆಯನ್ನು Jio ಸ್ವಾಧೀನಪಡಿಸಿಕೊಂಡಾಗ Jiosaavn ಎಂದು ಮರು ಬ್ರಾಂಡ್ ಆಗಿದಂತೆ Jio ಮುಂದಿನ ದಿನಗಳಲ್ಲಿ Hotstar ಸ್ವಾಧೀನಪಡೆಸಿಕೊಂಡರೆ Jiohotstar ಆಗಬಹುದೆಂಬ ಯೋಚನೆ ಬಂದು domain ಹೆಸರು ಪರಿಶೀಲಿಸಿದಾಗ ಅದು ಲಭ್ಯವಿದ್ದರಿಂದ ಇದನ್ನು ಖರೀದಿಸಿ ಮಾರಾಟ ಮಾಡುವುದರ ಮೂಲಕ ತನ್ನ ಆಸೆಯಂತೆ ಕೇಂಬ್ರಿಡ್ಜ್ ನಲ್ಲಿ ಅಧ್ಯಯನ ಮಾಡುವ ಕನಸನ್ನು ಪೂರೈಸಿಕೊಳ್ಳಬಹುದೆಂದು ಯೋಚಿಸಿರುವುದಾಗಿ ಬರೆದುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ Jio Cinema ಅಥವಾ Hotstar ವಿಲೀನಗೊಂಡರೆ Jiohotstar ಎಂಬ ಹೆಸರು ಸೂಕ್ತವಾಗಿದೆ ಹಾಗಾಗಿ Reliance Industries/Viacom18 ಪರವಾಗಿ ಖರೀದಿಸಲು ಬಯಸಿದ್ದಲ್ಲಿ mail@jiohotstar.com ಇಮೇಲ್ ಗೆ ಸಂಪರ್ಕಿಸಬೇಕೆಂದು ಬರೆದುಕೊಂಡಿದ್ದರು.

ಆದರೆ ರಿಲಯನ್ಸ್ ಈಗ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ಹೊಸ ಅಪ್‌ಡೇಟ್ ಒಂದನ್ನು ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ. ತಾನು ಈ ಯೋಚನೆಯನ್ನು 2023ರಲ್ಲಿ ಕಾರ್ಯರೂಪಕ್ಕೆ ತಂದಾಗ ಯಾರೂ Jiohotstar ಟ್ರೇಡ್‌ಮಾರ್ಕ್ ಹೊಂದಿರಲಿಲ್ಲ ಹಾಗಾಗಿ ನಾನು ಯಾವುದೇ ಟ್ರೇಡ್‌ಮಾರ್ಕ್ ಉಲ್ಲಂಘನೆಯನ್ನು ಮಾಡಿಲ್ಲ.

ರಿಲಯನ್ಸ್ ಕಾರ್ಯನಿರ್ವಾಹಕರಾದ ಅಂಬುಜೇಶ್ ಯಾದವ್ ಜಿ ತನ್ನನ್ನು ಸಂಪರ್ಕಿಸಿದ್ದರು, ತಮ್ಮ ಅಧ್ಯಯನಕ್ಕೆ ಅಗತ್ಯವಾಗಿದ್ದ £ 93,345 ಗಾಗಿ ವಿನಂತಿಸಿದ್ದೆ ಆದರೆ ಅವರು ನಿರಾಕರಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಿಲಯನ್ಸ್ ವಿರುದ್ದ ನಿಲ್ಲುವ ಶಕ್ತಿ ತನಗಿಲ್ಲ, ಯಾವುದೇ ಸಮಯದಲ್ಲಿ ಈ domain ನಾನು ಕಳೆದುಕೊಳ್ಳಬಹುದು. ಯಾರಾದರು ಕಾನೂನು ವೃತ್ತಿಪರರು ನನಗೆ ಸಹಾಯ ಮಾಡಬಯಸಿದರೆ ನಾನು ಕೃತಜ್ಞರಾಗಿರುವುದಾಗಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ದೆಹಲಿ ಮೂಲದ ಟೆಕ್ಕಿಯ ಕುರಿತಾಗಿ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಹಾಗೆಯೇ ನೀವು https://jiohotstar.com/ ಗೆ ಭೇಟಿ ನೀಡಿದರೆ ಈ ಮೇಲೆ ಹೇಳಿದ ವಿಷಯ ಸಂಕ್ಷಿಪ್ತವಾಗಿ ಸಿಗುತ್ತದೆ.


ಇನ್ನಷ್ಟು ಸುದ್ದಿಗಳು: