ATM Card swapping fraud in Mangalore
Home » ಟ್ರೆಂಡಿಂಗ್ ನ್ಯೂಸ್ » ATM CARD ಬದಲು ಮಾಡಿ ಹಣ ವಂಚನೆ! ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು.

ಉಡುಪಿಯಲ್ಲಿ ಸಹಾಯದ ನೆಪವೊಡ್ಡಿ 3.39 ಲಕ್ಷ ವಂಚಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಹಿರಿಯ ನಾಗರೀಕರೊಬ್ಬರು 49,200 ರೂ. ಕಳೆದುಕೊಂಡಿರುವ ಘಟನೆ ಮರುಕಳಿಸಿದೆ.

ಬೆಳ್ತಂಗಡಿಯ ನ್ಯಾಯತರ್ಪು ಗ್ರಾಮದ 71 ವರ್ಷದ ಅಬುಬಕ್ಕರ್ ಹಣ ಕಳೆದುಕೊಂಡಿರುವ ವ್ಯಕ್ತಿ. ಅ. 2 ರಂದು ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿರುವ ಎಟಿಎಂ ಬೂತ್‌ನಲ್ಲಿ ಹಣವನ್ನು ಡ್ರಾ ಮಾಡಿಕೊಳ್ಳುವ ಸಂದರ್ಭದಲ್ಲಿ ಇಬ್ಬರು ಅನಾಮಿಕರು ಬೂತ್ ನ ಒಳಹೊಕ್ಕಿ ಸಹಾಯ ಮಾಡುವುದಾಗಿ ಹೇಳಿದ್ದಾರೆ.

ಅದನ್ನು ತಿರಸ್ಕರಿಸಿದ ಅಬುಬಕ್ಕರ್ ಹಣವನ್ನು ತೆಗೆದುಕೊಂಡು ಹೋಗುವ ತನಕವೂ ಎಟಿಎಂ ಬೂತ್‌ನಿಂದ ಹೊರಬರದೇ ಅಬುಬಕ್ಕರ್ ಅವರನ್ನೇ ಗಮನಿಸುತ್ತಿರುವುದಾಗಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಅ. 4ರಂದು ಪುನಃ ಹಣ ಡ್ರಾ ಮಾಡಲು ಎಟಿಎಂ ಪಿನ್ ನಮೂದಿಸಿದಾಗ ಪಿನ್ ಕಾರ್ಯ ನಿರ್ವಹಿಸದಿರುವುದನ್ನು ಗಮನಿಸಿ ಸಂಶಯಗೊಂಡು ಬ್ಯಾಂಕ್‌ಗೆ ಭೇಟಿ ನೀಡಿದಾಗ ವಂಚನೆಯಾಗಿರುವುದು ಖಚಿತವಾಗಿದೆ.

ವಂಚಕರು ಒಟ್ಟು 49,200 ರೂ. ಗಳನ್ನು ATM Card ಬದಲಿ ಮಾಡಿ ಹಣ ತೆಗೆದುಕೊಂಡಿದ್ದಾರೆ. ಪ್ರಕರಣ ಬೆಳ್ತಂಗಡಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.