Shivamogga Traffic Police Incident

Shivamogga: ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಕರ್ತವ್ಯ ನಿರತ ಟ್ರಾಫಿಕ್ ಪೋಲೀಸ್ ಪ್ರಭುರಾಜ್ ಮೇಲೆ ಕಾರು ಹಾಯಿಸಿ 100 ಮೀಟರ್ ಎಳೆದೊಯ್ದ ಕಾರು ಚಾಲಕ. ಆರೋಪಿ ಭದ್ರಾವತಿಯ ಕೇಬಲ್ ಆಪರೇಟರ್ ಮಿಥುನ್ ಜಗದಾಳೆಯನ್ನು ಬಂಧಿಸಿ ತನಿಖೆ ಮಾಡಲಾಗಿದೆ.


Home » ಟ್ರೆಂಡಿಂಗ್ ನ್ಯೂಸ್ » Shivamogga: ಕರ್ತವ್ಯ ನಿರತ ಟ್ರಾಫಿಕ್ ಪೋಲೀಸನ್ನು ಕಾರ್ ಬಾನೆಟ್ ಮೇಲೆ ಎಳೆದೊಯ್ದ ಕಾರು ಚಾಲಕ!

ಶಿವಮೊಗ್ಗದ ಪೂರ್ವ ಸಂಚಾರ ವಿಭಾಗದ ಟ್ರಾಫಿಕ್ ಪೋಲೀಸ್ ಕಾನ್‌ಸ್ಟೆಬಲ್ ಪ್ರಭುರಾಜ್ ಸಹ್ಯಾದ್ರಿ ಕಾಲೇಜಿನ ಮುಂದೆ ಕರ್ತವ್ಯ ನಿರ್ವಹಿಸುತ್ತಿದ್ದಾಗ MRS Circle ನಿಂದ ಹೊಳೆ ಬಸ್ ಸ್ಟಾಪ್ ಕಡೆಗೆ ಹೊರಟ್ಟಿದ್ದ ಸಂಚಾರ ನಿಯಮ ಉಲ್ಲಂಘಿಸಿದ್ದ ಕಿಯಾ ಸಾನೆಟ್ ಕಾರಿನ ಚಾಲಕನನ್ನು ವಿಚಾರಿಸಲು ಕಾರನ್ನು ನಿಲ್ಲಿಸಲು ಹೇಳಿದರು.

ಆದರೆ ಕಾರನ್ನು ನಿಲ್ಲಿಸದ ಚಾಲಕ ಕಾರಿಗೆ ಅಡ್ಡ ನಿಂತಿದ್ದ ಪೋಲೀಸ್ ಅವರ ಮೇಲೆ ವಾದ ಮಾಡುತ್ತಾ ಕಾರು ಚಲಾಯಿಸುತ್ತ ಮುಂದೆ ಹೋದ ಸಂದರ್ಭದಲ್ಲಿ ಪ್ರಭುರಾಜ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ ಅಷ್ಟಕ್ಕೂ ಕಾರು ನಿಲ್ಲಿಸದ ಚಾಲಕ 100 ಮೀ ಹಾಗೆಯೇ ವೇಗವಾಗಿ ಕಾರು ಚಲಾಯಿಸಿದ್ದಾನೆ.

ಸ್ವಲ್ಪ ದೂರ ತೆರಳಿದ ನಂತರ ಕಾರು ನಿಲ್ಲಿಸಿದಾಗ ಪ್ರಭುರಾಜ್ ಚಾಲಕನೊಂದಿಗೆ ಮಾತನಾಡಲು ಬರುತ್ತಿದ್ದಂತೆ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ.

ಚಾಲಕ ಮಿಥುನ್ ಜಗದಾಳೆ ಭದ್ರಾವತಿಯಲ್ಲಿ ಕೇಬಲ್ ಆಪರೇಟರ್ ಎಂದು ತಿಳಿದು ಬಂದಿದೆ. ಚಾಲಕನನ್ನು ಬಂಧಿಸಿ ತನಿಖೆ ನಡೆಸಲಾಗಿದೆ.


ಇನ್ನಷ್ಟು ಸುದ್ದಿಗಳು: