Ind vs NZ

Ind vs NZ: ಬೆಂಗಳೂರಿನಲ್ಲಿ ನಡೆದ ಭಾರತ-ನ್ಯೂಜಿಲೆಂಡ್‌ನ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿದ್ದ ಭಾರತ ತನ್ನ 2ನೇ ಟೆಸ್ಟ್ ಪಂದ್ಯವನ್ನು 3 ಪ್ರಮುಖ ವಿಕೆಟ್ ಕಬಳಿಸಿ ಮೊದಲ ದಿನದ ಆಟವನ್ನು ಶುಭಾರಂಭ ಮಾಡಿದೆ.


Home » ಕ್ರೀಡಾ ಸುದ್ದಿ » 2nd Test: 3 ವಿಕೆಟ್ ಕಬಳಿಸಿ ಆರಂಭಿಕ ಆಘಾತ ನೀಡಿದ ಅಶ್ವಿನ್! ಕೆ ಎಲ್ ರಾಹುಲ್ ಬದಲು ಶುಭ್‌ಮನ್ ಗಿಲ್ ತಂಡಕ್ಕೆ ಸೇರ್ಪಡೆ.

ಪುಣೆಯಲ್ಲಿ ನಡೆಯುತ್ತಿರುವ 2 ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯಾಹ್ನ ಭೋಜನ ವಿರಾಮದರೊಳಗೆ ರೋಹಿತ್ ಬಳಗವು 2 ಪ್ರಮುಖ ವಿಕೆಟ್‌ಗಳಾದ ಟಾಮ್ ಲಾಥಮ್ 15 (22) ಮತ್ತು ಡಿವಾನ್ ಕಾನ್ವೆ 76 (141) ಔಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.

ಭೋಜನದ ವಿರಾಮದ ಬಳಿಕ ಮತ್ತೆ ವಿಲ್ಲ್ ಯಂಗ್ 18. (45) ವಿಕೆಟ್ ತೆಗೆದು ಒಟ್ಟು 3 ವಿಕೆಟ್ ಕಬಳಿಸುವ ಮೂಲಕ ರವಿಚಂದ್ರನ್ ಅಶ್ವಿನ್ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.

೨ನೇ ಪಂದ್ಯದಲ್ಲಿ ಕೆ ಎಲ್ ರಾಹುಲ್ ಬದಲಿಗೆ ಶುಭ್‌ಮನ್ ಗಿಲ್ ಅವರಿಗೆ ಸ್ಥಾನ ನೀಡಲಾಗಿದೆ. ಮೊಹಮ್ಮದ್ ಸಿರಾಜ್ ಬದಲಿಗೆ ಆಕಾಶ್ ದೀಪ್ ಹಾಗೂ ನ್ಯೂಜಿಲೆಂಡ್ ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್‌ಗಳು ಹೆಚ್ಚಿರುವುದರಿಂದ ಕುಲ್‌ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸದ್ಯ 3 ವಿಕೆಟ್ ನಷ್ಟಕ್ಕೆ 56 ಓವರ್‌ಗಳಲ್ಲಿ 185 ರನ್ ಬಾರಿಸಿರುವ ನ್ಯೂಜಿಲೆಂಡ್ ತಂಡದಲ್ಲಿ ರಚಿನ್ ರವೀಂದ್ರ 55 (94), ಡಾರಿಲ್ ಮಿಚ್ಚೆಲ್ 14 (37) ಆಟ ಮುಂದುವರೆಸಿದ್ದಾರೆ.


ಇನ್ನಷ್ಟು ಸುದ್ದಿಗಳು: